
ಶೂಟೌಟ್ ಪ್ರಕರಣದ ಆರೋಪಿಯಿಂದ ಕಿಡ್ನ್ಯಾಪ್; ಬ್ಲೇಡ್ ಸಾದಿಕ್ ಅಂದರ್!
(ಗಲ್ಫ್ ಕನ್ನಡಿಗ)ವಿಟ್ಲ : ಕಬಕ ಶೂಟೌಟ್ ಪ್ರಕರಣದ ಆರೋಪಿ ಕುಖ್ಯಾತ ಪಾತಕಿ ಬ್ಲೇಡ್ ಸಾದಿಕ್‌ನನ್ನು ಮತ್ತೆ ಬಂಧಿಸಲಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಆತ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಹೊಂದಿದ್ದ. ಬಂದ ನಂತರ ಈತ ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಬಂಧಿಸಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
(ಗಲ್ಫ್ ಕನ್ನಡಿಗ)ಕಬಕದಲ್ಲಿನ ಶೂಟೌಟ್ ಪ್ರಕರಣದ ರೂವಾರಿಯಾಗಿದ್ದ ಈತ ಕಳೆದ ತಿಂಗಳಷ್ಟೇ ಜೈಲಿನಿಂದ ಬಿಡುಗಡೆ ಹೊಂದಿದ್ದ. ಸುಮಾರು 14 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
(ಗಲ್ಫ್ ಕನ್ನಡಿಗ)ಕುಖ್ಯಾತ ಪಾತಕಿ ಸಾಧಿಕ್ ಯಾನೆ ಬ್ಲೇಡ್ ಸಾದಿಕ್ ಎಂದೇ ಕುಖ್ಯಾತಿ ಪಡೆದಿರುವ ಈತ ಇದೀಗ ಅಪಹರಣ ಹಾಗೂ ಜೀವ ಬೆದರಿಕೆ ಒಡ್ಡಿದ್ದ ಕೃತ್ಯವೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಸಾದಿಕ್‌ನನ್ನು ಬಂಧಿಸಿದ್ದು, ಆತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.