ಬಾವಿಯ ಆವರಣಗೋಡೆಗೆ ಢಿಕ್ಕಿ ಹೊಡೆದ ಲಾರಿ; ಅಪಘಾತದಿಂದ ಭಾರಿ ಅಪಾಯದ ಆತಂಕ
Tuesday, August 18, 2020
(ಗಲ್ಫ್ ಕನ್ನಡಿಗ)ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಅಟಲ್ ನಗರ ಎಂಬಲ್ಲಿ ಲಾರಿಯೊಂದು ರಸ್ತೆಗೆ ತಾಗಿಕೊಂಡಿರುವ ಬಾವಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
(ಗಲ್ಫ್ ಕನ್ನಡಿಗ)ಡಿಕ್ಕಿಯ ರಭಸಕ್ಕೆ ಬಾವಿಯ ರಸ್ತೆಗೆ ಅಭಿಮುಖವಾಗಿರುವ ಗೋಡೆಯ ಪಾರ್ಶ್ವ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಲಾರಿಯು ಬಾವಿಯ ಅಂಚಿನಲ್ಲಿ ನಿಂತಿದ್ದು ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಆದರೇ ತಡೆಗೋಡೆಯು ಸಂಪೂರ್ಣ ಕುಸಿದಿರುವುದರಿಂದ ಲಘು ವಾಹನಗಳಿಗೆ ಅಪಾಯ ಎದುರಾಗಿದೆ. ಬಾವಿಯು ರಸ್ತೆಯ ಅಂಚಿನಲ್ಲಿರುವುದರಿಂದ, ಘನ ವಾಹನಗಳಿಗೆ ರಸ್ತೆ ಕಲ್ಪಿಸುವ ಸಮಯದಲ್ಲಿ ಲಘು ವಾಹನಗಳು ಎಡ ಬದಿಗೆ ಸರಿದರೇ ತೆರೆದ ಭಾವಿ ಭಾರೀ ಅನಾಹುತಕ್ಕೆ ಕಾರಣಾವಾಗುವ ಸಾಧ್ಯತೆ ಇದೆ.