ಪುತ್ತೂರು ಸಂಪ್ಯದಲ್ಲಿ ವ್ಯಕ್ತಿಗೆ ಢಿಕ್ಕಿ ಹೊಡೆದ ಯುವತಿ ಚಲಾಯಿಸುತ್ತಿದ್ದ ಕಾರು; ಅಪಘಾತದ ಭೀಕರ ದೃಶ್ಯ ವೈರಲ್
Sunday, August 30, 2020
(ಗಲ್ಫ್ ಕನ್ನಡಿಗ)ಮಂಗಳೂರು; ಪುತ್ತೂರಿನ ಸಂಪ್ಯದಲ್ಲಿ ನಡೆದ ಅಪಘಾತದ ಭೀಕರ ದೃಶ್ಯವೊಂದು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
(ಗಲ್ಫ್ ಕನ್ನಡಿಗ)ಆ. 28 ರ ಸಂಜೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ಈ ಭೀಕರ ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಹಾರಿಕೊಂಡು ರಸ್ತೆಗೆ ಬೀಳುವ ವ್ಯಕ್ತಿಯ ಮೇಲೆ ಬೈಕ್ ಚಲಿಸುತ್ತದೆ. ಘಟನೆಯ ತಕ್ಷಣ ಜನರು ಓಡಿಕೊಂಡು ಬಂದು ರಕ್ಷಣೆ ಮಾಡುತ್ತಾರೆ. ಕಾರು ಚಾಲನೆ ಮಾಡುತ್ತಿದ್ದ ಯುವತಿ ಕೂಡ ರಕ್ಷಣೆ ಗೆ ಧಾವಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
(ಗಲ್ಫ್ ಕನ್ನಡಿಗ)