7 ಸೆಕೆಂಡ್ ವಿಡಿಯೋದಲ್ಲಿ ಶರಣ್ ಪಂಪ್ ವೆಲ್ ಗೆ ಗೃಹಸಚಿವರು ಹೇಳಿದ ಗುಟ್ಟು ರಟ್ಟು!: ನಿಮ್ಮ ಮೇಲೆ ಏನೇ ಕೇಸ್ ಹಾಕಿದ್ರು ತೆಗೆದಾಕ್ತಿವಿ!- videoಮಂಗಳೂರು: ಗೃಹಸಚಿವರನ್ನು ಭೇಟಿಯಾಗಿ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮನವಿ ನೀಡುವ ಸಂದರ್ಭದಲ್ಲಿ ತೆಗೆದ ವಿಡಿಯೋವೊಂದು ಗುಟ್ಟು ರಟ್ಟುಗೊಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ


ಉಡುಪಿಯಿಂದ ಬೆಂಗಳೂರಿಗೆ ಗೃಹಸಚಿವರು ಹೋಗುವ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಹಿಂಪ ಮುಖಂಡರು ಮನವಿ ನೀಡಲು ಹೋಗಿದ್ದರು. ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರು ಎನ್ ಐ ಎ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮನವಿ ನೀಡಿದ್ದರು. ಈ ಸಂದರ್ಭದಲ್ಲಿ ತೆಗೆದ ಏಳು ಸೆಕೆಂಡ್ ವಿಡಿಯೋವನ್ನು ವಿಹಿಂಪ ಮಾಧ್ಯಮ ಗ್ರೂಪ್ ನಲ್ಲಿ ಹಾಕಲಾಗಿತ್ತು. ಆದರೆ ಆ ಏಳು ಸೆಕೆಂಡ್ ವಿಡಿಯೋ ಗೃಹಸಚಿವರು ಶರಣ್ ಪಂಪ್ ವೆಲ್ ಗೆ ಗುಟ್ಟಿನಲ್ಲಿ ಹೇಳಿದ್ದನ್ನು ಬಹಿರಂಗಪಡಿಸಿದೆ. ನಿಮ್ಮ ಮೇಲೆ ಯಾವುದೇ ಕೇಸ್ ಹಾಕಿದ್ರೂ ಅದನ್ನು ತೆಗೆದಾಕ್ತಿವಿ ಅಂತ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಗೆ ಗೃಹಸಚಿವರು ಹೇಳುತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ