ಆ.15 ರಂದು ಆಧುನಿಕ ಮೀನು ಮಾರುಕಟ್ಟೆ ಉದ್ಘಾಟನೆ
Thursday, August 13, 2020
ಕಾರವಾರ : ನಗರದ ಗಾಂಧಿ ಮಾರುಕಟ್ಟೆ ಹತ್ತಿರ ನಿರ್ಮಿಸಲಾಗಿರುವ ಆಧುನಿಕ ಮೀನು ಮಾರುಕಟ್ಟೆ ಆಗಷ್ಟ 15 ರಂದು ಬೆಳಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಘನ ಉಪಸ್ಥಿತಿಯಲ್ಲಿ ಕಾರ್ಮಿಕ ಮತ್ತು ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರಿಂದ ಮಾರುಕಟ್ಟೆ ಉಧ್ಘಾಟನೆಯಾಗುವುದು. ಶಾಸಕಿ ರೂಪಾಲಿ ನಾಯ್ಕ ಅವರು ಅಧ್ಯಕ್ಷತೆ ವಹಿಸುವರು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಉಪಸ್ಥಿತರಿರುವರು.