ವರ್ಷಾಂತ್ಯಕ್ಕೆ ಆಕ್ಸ್‌ಫರ್ಡ್‌ ಕೋವಿಡ್ ಲಸಿಕೆ ಲಭ್ಯ ಸಾಧ್ಯತೆ: ಪ್ರತಿ ಡೋಸ್‌ಗೆ 225 ರೂ.ನವದೆಹಲಿ: ವರ್ಷಾಂತ್ಯಕ್ಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಕೋವಿಡ್-19 ಲಸಿಕೆ ಉತ್ಪಾದನಾ ಪಾಲುದಾರಿಕೆಯನ್ನು ಹೊಂದಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ 225 ರೂ.ಗೆ ನೀಡುವುದಾಗಿ ಪ್ರಕಟಿಸಿದೆ.

ಇದೇ ವೇಳೆ, ಕೊರೊನಾದಿಂದ ತತ್ತರಿಸಿದ ಭಾರತಕ್ಕೆ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, 73 ದಿನದಲ್ಲಿ ಮಹಾಮಾರಿ ಕೋವಿಡ್ ಗೆ ಮದ್ದು ಸಿಗಲಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿಕೊಂಡಿದೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ 100 ಮಿಲಿಯನ್ ಡೋಸ್ ಕೋವಿಡ್ 19 ಲಸಿಕೆಗಳನ್ನು ತಯಾರಿಸಲು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 150 ಮಿಲಿಯನ್ ಡಾಲರ್ ಹಣವನ್ನು ಒದಗಿಸುತ್ತದೆ ಎಂದು ಸೀರಮ್ ತಿಳಿಸಿದೆ.

ಅಸ್ಟ್ರಾಜೆನೆಕಾ ಪರವಾನಗಿ ಹೊಂದಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಅಭ್ಯರ್ಥಿಯು ಭಾರತ ಮತ್ತು ಇತರ ಹಲವಾರು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳ ಮುಂದುವರಿದ ಹಂತದಲ್ಲಿದೆ ಮತ್ತು 2021ರ ಮೊದಲಾರ್ಧದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ.

ಅಸ್ಟ್ರಾಜೆನೆಕಾ ಮತ್ತು ನೊವಾವಾಕ್ಸ್ ಲಸಿಕೆಗಳಿಗೆ 3 ಡಾಲರ್ ಬೆಲೆ ನಿಗದಿಪಡಿಸಿ ಜಗತ್ತಿನ ಸುಮಾರು 92 ದೇಶಗಳಲ್ಲಿ ಗಾವಿಯ ಕೋವಾಕ್ಸ್ ಅಡ್ವಾನ್ಸ್ ಮಾರ್ಕೆಟ್ ಕಮಿಟ್ ಮೆಂಟ್ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ ಎನ್ನಲಾಗಿದೆ.

ವಿಶ್ವದ ಅತಿ ಹೆಚ್ಚು ಕೊರೊನಾ ಸೋಂಕಿತರು ಹೊಂದಿರುವ ಮೂರನೇ ದೇಶ ಅನ್ನೋ ಕುಖ್ಯಾತಿಗೂ ಒಳಗಾಗಿದೆ. ಏಳು ತಿಂಗಳು ಇನ್ನು ಬೆಂಬಡಿದ ಈ ಹೆಮ್ಮಾರಿಗೆ ಗುಡ್ ಬೈ ಹೇಳುವ ಸಮಯ ಸನ್ನಿಹಿತವಾಗುತ್ತಿದೆ. ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅನ್ನೊ ಸಂಸ್ಥೆ ಇನ್ನು 73 ದಿನಗಳಲ್ಲಿ ಲಸಿಕೆ ಮಾರಾಟಕ್ಕೆ ಮುಕ್ತ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಭಾರತದಲ್ಲಿ ಬ್ರಿಟನ್ ವ್ಯಾಕ್ಸಿನ್ ಪರೀಕ್ಷೆ: ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬ್ರಿಟನ್ ನಲ್ಲಿರುವ ಆಕ್ಸ್ ಫರ್ಡ್ ಯೂನಿವರ್ಸಿಟಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಜೇನಿಕಾ ಎಂಬ ಸಂಸ್ಥೆ ಅಭಿವೃದ್ಧಿ ಪಡಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಅನುಮತಿ ಪಡೆದುಕೊಂಡಿದ್ದಾರೆ.

ಇದರ ಭಾಗವಾಗಿ ಭಾರತದಲ್ಲೂ ಆಕ್ಸ್ ಫರ್ಡ್ ಯೂನಿವರ್ಸಿಟಿಯ ಕೋವಿಶೀಲ್ಡ್ ಹೆಸರಿನ ಕೊರೊನಾ ನಿಗ್ರಹ ಸಲಿಕೆ ಭಾರತದಲ್ಲಿ ನಿನ್ನೆಯಿಂದ ಪ್ರಯೋಗಕ್ಕೆ ಒಳಪಟ್ಟಿದೆ. ಅಹಮದಾಬಾದ್, ಮುಂಬೈ ಮತ್ತು ಪುಣೆಯಲ್ಲಿ ಆರಂಭದಲ್ಲಿ 1,600 ಅಧಿಕ ಮಂದಿಯ ಮೇಲೆ ಪ್ರಯೋಗ ನಡೆಯಲಿದ್ದು ಮೂರನೇ ಹಂತದ ಪ್ರಯೋಗಗಳನ್ನು ಜೊತೆಯಾಗಿ ಮಾಡಲಿದೆ.

ಈ ಸಲಿಕೆಯ ಪ್ರಯೋಗಗಳನ್ನು ಭಾರತದಲ್ಲಿ 58 ದಿನಗಳಲ್ಲಿ ಮುಗಿಸಲಿದ್ದು 73 ದಿನಗಳಲ್ಲಿ ಅಂದ್ರೆ ಅಕ್ಟೋಬರ್ ಅಂತ್ಯಕ್ಕೆ ಜನರ ಕೈಗೆ ಸಿಗುವಂತೆ ವಾಣಿಜ್ಯೀಕರಣ ಮಾಡಲಾಗುವುದು ಎಂದು ಸೀರಮ್ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಕೇಂದ್ರ ಆರೋಗ್ಯ ಇಲಾಖೆಯೂ ಈ ಲಸಿಕೆಯ ಪ್ರಯೋಗಳ ಮೇಲೆ ನಿಗಾ ಇಟ್ಟಿದ್ದು ಶೀಘ್ರ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಲ್ಲಿದೆ.