2 ದಿನಗಳಿಂದ ಡಿ ಕೆ ಶಿವಕುಮಾರ್ ಜೊತೆಗಿದ್ದ ಐವನ್ ಡಿಸೋಜಗೆ ಕೊರೊನಾ
Saturday, August 1, 2020
(ಗಲ್ಫ್ ಕನ್ನಡಿಗ) ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಡಿ ಕೆ ಶಿವಕುಮಾರ್ ಅವರೊಂದಿಗೆ ಇದ್ದ ಐವನ್ ಡಿಸೋಜ ಅವರಿಗೆ ಕೊರೊನಾ ದೃಢಪಟ್ಟಿದೆ.
(ಗಲ್ಫ್ ಕನ್ನಡಿಗ) ವಿಧಾನಪರಿಷತ್ ಮಾಜಿ ಸದಸ್ಯರಾಗಿರುವ ಐವನ್ ಡಿಸೋಜ ಅವರಿಗೆ ಇಂದು ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಅವರೆ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
(ಗಲ್ಫ್ ಕನ್ನಡಿಗ) ಐವನ್ ಡಿಸೋಜ ಜೊತೆಗೆ ಅವರ ಪತ್ನಿಗೂ ಕೊರೊನಾ ದೃಢಪಟ್ಟಿದ್ದು ಯಾವುದೇ ಕೊರೊನಾ ಲಕ್ಷಣಗಳಿರಲಿಲ್ಲ. ಆದರೆ ಟೆಸ್ಟ್ ಮಾಡಿದಾಗ ಕೊರೊನಾ ದೃಢಪಟ್ಟಿದೆ.
ಐವನ್ ಡಿಸೋಜ ಅವರು ಮಂಗಳೂರು ನಿನ್ನೆ ವಿಮಾನ ನಿಲ್ದಾಣದಿಂದಲೇ ಡಿ ಕೆ ಶಿವಕುಮಾರ್ ಜೊತೆಗಿದ್ದು ಇಂದು ಕೂಡ ಅವರೊಂದಿಗೆ ಓಡಾಡಿಕೊಂಡಿದ್ದರು. ಇದೀಗ ಐವನ್ ಡಿಸೋಜ ಅವರಿಗೆ ಕೊರೊನಾ ದೃಢಪಟ್ಟಿರುವುದರಿಂದ ಡಿ ಕೆ ಶಿವಕುಮಾರ್ ಜೊತೆಗೆ ಅವರೊಂದಿಗೆ ಇದ್ದ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಕೊರೊನಾ ಭೀತಿ ಎದುರಾಗಿದೆ.