-->
ಕೋವಿಡ್-19 ನಮ್ಮೆಲ್ಲರ ಜೀವನಕ್ರಮವನ್ನೇ ಬದಲಿಸಿದೆ.....ಡಿಸಿಎಂ ಅಶ್ವಥ್ ನಾರಾಯಣ್....

ಕೋವಿಡ್-19 ನಮ್ಮೆಲ್ಲರ ಜೀವನಕ್ರಮವನ್ನೇ ಬದಲಿಸಿದೆ.....ಡಿಸಿಎಂ ಅಶ್ವಥ್ ನಾರಾಯಣ್....


ಕೋವಿಡ್-19 ನಮ್ಮೆಲ್ಲರ ಜೀವನಕ್ರಮವನ್ನೇ ಬದಲಿಸಿದೆ.....
ಡಿಸಿಎಂ ಅಶ್ವಥ್ ನಾರಾಯಣ್........

ತುಮಕೂರು:
ಕೋವಿಡ್-19 ನಮ್ಮೆಲ್ಲರ ಜೀವನಕ್ರಮವನ್ನೇ ಬದಲಿಸಿದೆ. ಜಗತ್ತೇ ಒಂದು ಹಳ್ಳಿಯಂತೆ ಆಗಿದೆ. ಟೆಕ್ನಾಲಜಿ ನಮ್ಮೆಲ್ಲರನ್ನು ಹತ್ತಿರ ಮಾಡಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ತುಮಕೂರಿನ ಪಂಡಿತನಹಳ್ಳಿ ಗ್ರಾಮದಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಗ್ರಾಮೀಣಾಭಿವೃದ್ಧಿ ಕೇಂದ್ರದ ಅಡಿಯಲ್ಲಿ ಸ್ಥಾಪಿಸಲಾಗಿರುವ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಜೈವಿಕವನವನ್ನು ಸಸಿ ನೆಟ್ಟು ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು,
ಈಗ ಯಾವುದೂ ಹತ್ತಿರವೂ ಅಲ್ಲ, ದೂರವೂ ಅಲ್ಲ. ಜರ್ಮನಿಯಂಥ ದೇಶದಲ್ಲಿ ಕುಗ್ರಾಮದಂಥ ಪ್ರದೇಶದಲ್ಲೂ ಅದ್ಭುತವಾದ ಪ್ರಗತಿಯನ್ನು ನೋಡಬಹುದು. ಅಂತಹ ಸ್ಥಿತಿಯನ್ನು ನಮ್ಮ ದೇಶದಲ್ಲೂ ನೋಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದು ಸಾಕಾರವಾಗುತ್ತಿದೆ ಎಂದರು.
ರಾಜಧಾನಿ ಬೆಂಗಳೂರಿಗೆ ಸರಿಸಮನಾಗಿ ಅಷ್ಟೇ ವೇಗದಿಂದ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದ್ರು.
ಶೈಕ್ಷಣಿಕವಾಗಿ ಶ್ರೀಮಂತವಾಗಿರುವ ತುಮಕೂರು ಜಿಲ್ಲೆಯಲ್ಲಿ ಬಿಟಿ ಕ್ಷೇತ್ರಕ್ಕೆ ಹೇಳಿಮಾಡಿಸಿದ ವಾತಾವರಣವಿದೆ. ಇದೀಗ ಲೋಕಾರ್ಪಣೆ ಆಗಿರುವ ಜೈವಿಕವನವೂ ಉತ್ತಮ ಪ್ರಯತ್ನವಾಗಿದೆ ಎಂದರು.

ತುಮಕೂರು ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ನಗರವಾಗಿದೆ. ಆದರೆ, ನಗರದ ಸುತ್ತಮುತ್ತಲಿನ ಪ್ರದೇಶಗಳು ಹಿಂದುಳಿದಿವೆ. ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು. ಅದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಸರಕಾರ ಮಾಡಲಿದೆ. ಅಭಿವೃದ್ಧಿಯಲ್ಲಿ ಸುಸ್ಥಿರತೆ ಮತ್ತು ಕಮರ್ಷಿಯಲ್ ವಯಬಲಿಟಿ ಇಲ್ಲವಾದರೆ ಆ ಪ್ರಗತಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಶೈಕ್ಷಣಿಕವಾಗಿ ಬಹಳಷ್ಟು ಮುಂದುವೆರದಿರುವ ತುಮಕೂರಿನಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲಕ್ಕೇನೂ ಕೊರತೆ ಇಲ್ಲ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಸಮಸ್ಯೆಯಾಗುವುದಿಲ್ಲ. ಉತ್ತಮ ಹಾಗೂ ರಚನಾತ್ಮಕ ಯೋಜನೆಯನ್ನು ರೂಪಿಸಿ ಅದನ್ನು ಸಮರ್ಥವಾಗಿ ಜಾರಿ ಮಾಡುವ ಇಚ್ಚಾಶಕ್ತಿ ಬೇಕು. ಅಂತಹ ಇಚ್ಛಾಶಕ್ತಿ ಯಡಿಯೂರಪ್ಪ ಸರಕಾರಕ್ಕಿದೆ. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಜತೆಗೆ ಬದ್ಧತೆ ಹಾಗೂ ರಾಜಿಯಾಗದ ಗಟ್ಟಿತನವೂ ಸರಕಾರಕ್ಕಿದೆ ಎಂದು ಅವರು ನುಡಿದರು.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿದರು. ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಹಾಜರಿದ್ದರು.

Ads on article

Advertise in articles 1

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us- Pay Rs 101

  

advertising articles 2

Advertise under the article

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us-Pay Rs 101