ಬಿರುಮಲೆಗುಡ್ಡದಲ್ಲಿ 17 ವರ್ಷದ ಯುವತಿಯೊಂದಿಗೆ 3 ಯುವಕರು ಸಿಕ್ಕ ಪ್ರಕರಣ; ಕಿಡ್ನ್ಯಾಪ್ , ಪೋಕ್ಸೋ ಪ್ರಕರಣ ದಾಖಲು, ಮೂವರು ಅರೆಸ್ಟ್


(ಗಲ್ಫ್ ಕನ್ನಡಿಗ)ಮಂಗಳೂರು; ಪುತ್ತೂರಿನ ಬಿರುಮಲೆ ಗುಡ್ಡದಲ್ಲಿ ಓರ್ವ ಯುವತಿ ಮೂವರು ಯುವಕರೊಂದಿಗೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರ ಮೇಲೆ ಕಿಡ್ನ್ಯಾಪ್ , ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

(ಗಲ್ಫ್ ಕನ್ನಡಿಗ)ಮುಹಮ್ಮದ್ ನಯೀಮ್, ಮುಹಮ್ಮದ್ ತಾಸೀರ್, ಇಮ್ರಾನ್ ಬಂಧಿತರು.


(ಗಲ್ಫ್ ಕನ್ನಡಿಗ)ಇವರೊಂದಿಗೆ ಬಿರುಮಲೆಗುಡ್ಡದಲ್ಲಿ ಪತ್ತೆಯಾದ ಯುವತಿಯ ತಂದೆ ಪೊಲೀಸರಿಗೆ ಮೂವರು ಆರೋಪಿಗಳ ವಿರುದ್ಧ ಕಿಡ್ನ್ಯಾಪ್ ಮತ್ತು ಲೈಂಗಿಕ ಕಿರುಕುಳ ದೂರನ್ನು ನೀಡಿದ್ದಾರೆ.

(ಗಲ್ಫ್ ಕನ್ನಡಿಗ)ಮಂಗಳೂರಿನ ಕೊಡಿಯಾಲ್ ಬೈಲ್ ನ 17 ವರ್ಷದ ಯುವತಿ ಮೂವರು   ಯುವಕರೊಂದಿಗೆ  ಪತ್ತೆಯಾದ ಬಳಿಕ  ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ್ದರು‌. ಬಳಿಕ ಯುವತಿಯ‌ ತಂದೆ ಯುವತಿಯನ್ನು ಕರೆದುಕೊಂಡು ಹೋಗಿದ್ದು ಮಗಳು ನೀಡಿದ ಮಾಹಿತಿ ಆಧಾರದಲ್ಲಿ ದೂರು ನೀಡಿದ್ದಾರೆ.

(ಗಲ್ಫ್ ಕನ್ನಡಿಗ)ನನ್ನ 17 ವರ್ಷದ ಮಗಳು  ಸಂಜೆ 7 ಗಂಟೆಗೆ ಕೊಡಿಯಾಲ್ ಬೈಲ್ ನ ಎಂಪಾಯರ್ ಮಾಲ್ ಗೆ ಹೋಗಿ ಬರುವೆನೆಂದು ಹೇಳಿ ರಾತ್ರಿಯಾದರೂ ಬಂದಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಆಕೆ ಸಿಕ್ಕಿರಲಿಲ್ಲ. ಮರುದಿನ ಆಕೆ ಬಿರುಮಲೆಗುಡ್ಡದಲ್ಲಿ ಸಿಕ್ಕಿಕೊಂಡಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ತಿಳಿಸಿದ ಅವರು ಮಗಳಲ್ಲಿ ವಿಚಾರಿಸಿದಾಗ ಮೂವರು ಆರೋಪಿಗಳು ಮಾತಾಡಲು ಇದೆ ಎಂದು ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಬಿಜೈ‌ನಲ್ಲಿರುವ ಪ್ಲ್ಯಾಟ್ ನಲ್ಲಿ ಪಾರ್ಟಿ ಮಾಡಿದ್ದಾರೆ. ಮಗಳನ್ನು ಮನೆಗೆ ಹೋಗಲು ಬಿಡದೆ ಪುತ್ತೂರಿನಲ್ಲಿ ಸ್ನೇಹಿತೆಯನ್ನು ಭೇಟಿಯಾಗಲು ಇದೆ ಎಂದು ಪುಸಲಾಯಿಸಿ ಪುತ್ತೂರಿನ ಬಿರುಮಲೆಗುಡ್ಡೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

(ಗಲ್ಫ್ ಕನ್ನಡಿಗ)ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಕಿಡ್ನ್ಯಾಪ್ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ.

(ಗಲ್ಫ್ ಕನ್ನಡಿಗ)