ಮೃಚ್ಛಕಟಿಕ" ನಾಟಕ ಯುಟ್ಯೂಬ್ ಲೋಕಾರ್ಪಣೆ
Thursday, July 9, 2020
(ಗಲ್ಪ್ ಕನ್ನಡಿಗ ಸುದ್ದಿ)
ದುಬೈ: ಧ್ವನಿ ಪ್ರತಿಷ್ಠಾನವು dubai emirates theater ಸಭಾಗಂಣದಲ್ಲಿ 34ನೇ ವಾರ್ಷಿಕೋತ್ಸವದ ಅಂಗವಾಗಿ ರಂಗವೇರಿಸಿದ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡಕ್ಕೆ ಭಾಷಾಂತರಿಸಿದ ಶೂದ್ರಕ ಮಹಾಕವಿಯ ಮೃಚ್ಛಕಟಿಕ ನಾಟಕವನ್ನು ಇಂದು youtube ವೀಕ್ಷಕರಿಗಾಗಿ ಲೋಕಾರ್ಪಣೆ ಗೊಳಿಸಲಾಯಿತು.
(ಗಲ್ಪ್ ಕನ್ನಡಿಗ ಸುದ್ದಿ) ಲೋಕಾರ್ಪಣೆ ಗೊಳಿಸಿದ ತುಂಭೆ ಗ್ರೂಫ್ ಅಫ಼್ ಕಂಪೆನಿಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಭೆ ಮೊಯಿದ್ದೀನ್ ಅವರು ಕಳೆದ 35 ವರ್ಷ ಗಳಿಂದ ಹೊರನಾಡು ಮತ್ತು ವಿದೇಶದಲ್ಲಿ ಕನ್ನಡ ರಂಗ ಸೇವೆ ನಡೆಸುತ್ತಾ ಬಂದಿರುವ ಧ್ವನಿ ಪ್ರತಿಷ್ಠಾನದ ಚಟುವಟಿಕೆ ಗಳನ್ನು ಶ್ಲಾಘಿಸಿದರು.
(ಗಲ್ಪ್ ಕನ್ನಡಿಗ ಸುದ್ದಿ) ನಾಟಕದ ನಿರ್ದೇಶಕ ಹಾಗು ಧ್ವನಿ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಯುವ ಜನಾಂಗಕ್ಕೆ ಭಾರತೀಯ ರಂಗ ಭೂಮಿಯನ್ನು ಪರಿಚಯಿಸುವ ಉದ್ದೇಶದಿಂದ ಧ್ವನಿ ಕೆಲವು ವರ್ಷಗಳಿಂದ ಪುರಾತನ ನಾಟಕಗಳನ್ನು ಆಯ್ಕೆ ಮಾಡಿ ದುಬೈಯಲ್ಲಿ ಪ್ರದರ್ಶಿಸಿತ್ತಾ ಬಂದಿದೆ ಎಂದು ಹೇಳಿದರು.
( ಗಲ್ಪ್ ಕನ್ನಡಿಗ ಸುದ್ದಿ)ಅಜ್ಮಾನ್ ನ ತುಂಭೆ ಮೇಡಿಕಲ್ ಕಾಲೇಜಿನಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಧ್ವನಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆಶೋಕ ಅಂಚನ್, ಸುಗಂಧರಾಜ್ ಬೇಕಲ್, ಆಶೋಕ ಬೈಲೂರ್, ಗಣೇಶ್ ಕುಲಾಲ್ ಹಾಗು ವಿಘ್ನೇಶ ಉಪಸ್ಥಿತರಿದ್ದರು.