ಜಿಲ್ಲಾಧಿಕಾರಿ ಗೆ ಬೆದರಿಕೆ ಬಂದರೂ ಖಂಡಿಸುವ ಸೌಜನ್ಯ ಸಚಿವರಿಗಿಲ್ಲ; ಖಾದರ್ ಆಕ್ರೋಶ ( video)
video
(ಗಲ್ಪ್ ಕನ್ನಡಿಗ)ಮಂಗಳೂರು;ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ರೂಪೇಶ್ ಅವರ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಯು.ಟಿ. ಖಾದರ್ ಇಂದು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗೆ ಬೆದರಿಕೆ ಬಂದರೂ ಅದರ ಬಗ್ಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರಿಗೆ ಖಂಡನೆ ಮಾಡುವ ಸೌಜನ್ಯವೂ ಇಲ್ಲ. ಪೊಲೀಸರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.
(ಗಲ್ಪ್ ಕನ್ನಡಿಗ) ಪೊಲೀಸರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ನಮ್ಮ ಜಿಲ್ಲೆಯ ಸಚಿವರು ಸಂಸದರು ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳಿಗೆ ಧೈರ್ಯ ತುಂಬುವ ಕೆಲಸವೂ ಮಾಡಿಲ್ಲ. ಖಾದರ್ ಕಾಲವಲ್ಲ ಎಂದು ಹೇಳಿದ್ದಾರೆ. ಆದರೆ ನನ್ನ ಅವಧಿಯಲ್ಲಿ ಎರಡೆರಡು ಐಎಸ್ ಅಧಿಕಾರಿಗಳ ವರ್ಗಾವಣೆಯೂ ಆಗಿಲ್ಲ. ಯಾರೂ ಕೂಡ ರಾಜೀನಾಮೆ ಕೂಡ ಕೊಟ್ಟಿಲ್ಲ ಆದರೆ ಬಿಜೆಪಿಯ ಅವಧಿಯಲ್ಲಿ ಇದೆಲ್ಲ ನಡೆದಿದೆ ಎಂದು ಹೇಳಿದರು.