ಬಕ್ರೀದ್ ಹಬ್ಬ; ರಾಯಚೂರಿನಲ್ಲಿ ಒಂಟೆ ಬಲಿ ನಿಷೇಧ
(ಗಲ್ಪ್ ಕನ್ನಡಿಗ) ರಾಯಚೂರು- ಬಕ್ರೀದ್ ಹಬ್ಬದಂದು ಒಂಟೆ ಬಲಿ ಕೊಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಪಶುಸಂಗೋಪನೆ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
(ಗಲ್ಪ್ ಕನ್ನಡಿಗ)ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಪ್ರಾಣಿ ಹಿಂಸೆ ತಡೆಗಟ್ಟಲು ಜಾರಿಯಲ್ಲಿರುವ ಕಾನೂನು ಜಾರಿಗೊಳಿಸುವ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
(ಗಲ್ಪ್ ಕನ್ನಡಿಗ) ಬಕ್ರೀದ್ ಹಬ್ಬದಂದು ಒಂಟೆ ಬಲಿ ಕೊಡುವುದು ಸಂಪೂರ್ಣ ನಿಷೇಧಿಸಲಾಗಿದೆ. ಆದರೂ ಯಾರಾದರೂ ಬಲಿ ಕೊಟ್ಟಿರುವುದು ಕಂಡುಬಂದಲ್ಲಿ ಅವರ ವಿರುದ್ದ ಕ್ರಮ ಜರುಗಿಸಬೇಕು, ಜಿಲ್ಲೆಗೆ ಈಗಾಗಲೇ ಅನ್ಯ ರಾಜ್ಯಗಳಿಂದ ಒಂಟೆಗಳು ಬಂದಿವೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಪರಿಶೀಲಿಸಬೇಕು ಮತ್ತು ಅವರ ಮೇಲೆ ಹೆಚ್ಚಿನ ನಿಗಾ ವಹಿಸಿ ಹಬ್ಬದದಂದು ಒಂಟಿಗಳನ್ನು ಬಲಿಯಾಗದಂತೆ ಗಮನ ಹರಿಸಬೇಕೆಂದರು.
(ಗಲ್ಪ್ ಕನ್ನಡಿಗ)ಬಕೀದ್ ಹಬ್ಬದಂದು ಗಂಡು ಕೋಣ, ಕುರಿ, ಮೇಕೆಯನ್ನು ಮಾತ್ರ ಕತ್ತರಿಸಬೇಕು, ಅನ್ಯ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಟ್ರಕ್‌ಗಳಲ್ಲಿ ಸರ್ಕಾರದ ನಿಯಮಾನುಸರವೇ ಕೋಣ, ಕುರಿ, ದನ ಕರುಗಳನ್ನು ಸಾಗಾಣಿಕೆ ಮಾಡಬೇಕು, ಜಾನುವಾರ ಸಾಗಾಣಿಕೆ ನಿಯಮಗಳ ಉಲ್ಲಂಘನೆಯಾದಲ್ಲಿ 10 ಸಾವಿರ ರೂ. ಗಳ ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಕ್ರಮವಾಗಿ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಪಶುಪಾಲನೆ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು ಅಂತಹವರ ವಿರುದ್ದ ಪ್ರಕರಣ ದಾಖಲಿಸಬೇಕೆಂದರು. ನಗರದಲ್ಲಿ ಬಿಡಾಡಿ ದನಗಳ ಮತ್ತು ಹಂದಿಗಳ ಹಾವಳಿಯನ್ನು ನಿಯಂತ್ರಿಸಬೇಕು, ನಾಳೆಯಿಂದಲೇ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.