ಸಮುದ್ರ ಮಧ್ಯೆ ಮಗುಚಿಬಿದ್ದ ಮೀನುಗಾರಿಕಾ ದೋಣಿ; 6 ಮೀನುಗಾರರು ಪಾರು
Friday, July 24, 2020
(ಗಲ್ಫ್ ಕನ್ನಡಿಗ) ಮಂಗಳೂರು: ಮಂಗಳೂರಿನ ಸಸಿಹಿತ್ಲುವಿನಲ್ಲಿ ಸಮುದ್ರದ ಮಧ್ಯೆ ಮೀನುಗಾರಿಕಾ ದೋಣಿಯೊಂದು ಹವಾಮಾನ ವೈಪರೀತ್ಯದಿಂದ ಮಗುಚಿಬಿದ್ದ ಘಟನೆ ನಡೆದಿದೆ.
(ಗಲ್ಫ್ ಕನ್ನಡಿಗ) ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಅದರಲ್ಲಿದ್ದ ಆರು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
(ಗಲ್ಫ್ ಕನ್ನಡಿಗ) ಸಸಿಹಿತ್ಲುವಿನ ಹೇಮನಾಥ್
ಸುಧಾಕರ್, ತಾರಾನಾಥ್, ಮತ್ತಿತರರು ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ ವೇಳೆ ಈ ಘಟನೆ ನಡದಿದೆ. ಸಮುದ್ರ ಮಧ್ಯೆ ಹವಾಮಾನ ವೈಪರಿತ್ಯದ ಕಾರಣ ದೋಣಿಯು ಮಗುಚಿ ಬಿದ್ದಿದ್ದು ಅದರಲ್ಲಿದ್ದ ಮೂರು ಮಂದಿ ಮೀನುಗಾರರು ಈಜಿಕೊಂಡು ದಡ ಸೇರಿದ್ದರು. ಇನ್ನಿಬ್ಬರನ್ನು ಮತ್ತೊಂದು ದೋಣಿಯ ಮೂಲಕ ರಕ್ಷಿಸಲಾಯಿತು. ಮತ್ತೋರ್ವ ಮೀನುಗಾರ ಉತ್ತರ ದಿಕ್ಕಿನಲ್ಲಿ ಸಾಗುತ್ತಿದ್ದ ದೋಣಿಯವರೆಗೆ ಈಜಿಕೊಂಡು ಸಾಗಿ ಸ್ವಯಂ ರಕ್ಷಣೆಗೊಳಗಾಗಿದ್ದಾರೆ. ಅವರು ಆ ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ತಲುಪಿದ್ದಾರೆ.