ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿತ್ಯ ಭಯಪಡಿಸುತ್ತಿದೆ ಕೊರೊನಾ ಸಾವಿನ ಪ್ರಕರಣ: ಇಂದು 8 ಸಾವು(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಾವಿನ ಪ್ರಕರಣ ನಿತ್ಯ ಆತಂಕ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಇಂದು ಎಂಟು ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 131 ಕ್ಕೆ ಏರಿಕೆಯಾಗಿದೆ.

(ಗಲ್ಪ್ ಕನ್ನಡಿಗ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನದಿಂದ ಪ್ರತಿದಿನ ಎಂಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರ ಮೊದಲು ಮೂರು ದಿನ ಪ್ರತಿದಿನ ಐದು ಮಂದಿ ಸಾವನ್ನಪ್ಪಿದ್ದರು. ಸಾವಿನ ಸಂಖ್ಯೆ ಏರುತ್ತಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ.

ಗಲ್ಫ್ ಕನ್ನಡಿಗ whatsapp ಗ್ರೂಪ್ ಗೆ join ಆಗಲು ಇಲ್ಲಿ ಕ್ಲಿಕ್ ✅ ಮಾಡಿ

(ಗಲ್ಪ್ ಕನ್ನಡಿಗ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸಾವನ್ನಪ್ಪಿದ ಎಂಟು ಮಂದಿಯಲ್ಲಿ ಒಬ್ಬರು ಹುಬ್ಬಳ್ಳಿಯವರು, ಒಬ್ಬರು ಉಡುಪಿ ಜಿಲ್ಲೆಯವರಾಗಿದ್ದಾರೆ. ಉಳಿದ ಆರು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.


(ಗಲ್ಪ್ ಕನ್ನಡಿಗ) ಹುಬ್ಬಳ್ಳಿಯ 68 ವರ್ಷದ ಗಂಡಸು, ಉಡುಪಿಯ 82 ವರ್ಷದ ಗಂಡಸು ಮೃತಪಟ್ಟರೆ ದಕ್ಷಿಣ ಕನ್ನಡದ ಬಂಟ್ವಾಳದ 65 ವರ್ಷದ ಗಂಡಸು, ಮಂಗಳೂರಿನ 64,65, 65, 51 ವರ್ಷದ ಗಂಡಸು ಮತ್ತು 65 ವರ್ಷದ ಹೆಂಗಸು ಮೃತಪಟ್ಟಿದ್ದಾರೆ.


(ಗಲ್ಪ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 119 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈವರೆಗೆ ಪಾಸಿಟಿವ್ ಆದವರ ಸಂಖ್ಯೆ 4930 ಕ್ಕೆ ಏರಿಕೆಯಾಗಿದೆ.ಇಂದು 80 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 2297 ಕ್ಕೆ ಏರಿಕೆಯಾಗಿದೆ. 2502 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ


(ಗಲ್ಪ್ ಕನ್ನಡಿಗ)