39 ವರ್ಷದ ಯುವಕ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಏಳು‌ ಮಂದಿ ಕೊರೊನಾ ಸೋಂಕಿತರು ಸಾವು


(ಗಲ್ಫ್ ಕನ್ನಡಿಗ) ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದಿಂದ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು 7 ಮಂದಿ ಸಾವನ್ನಪ್ಪಿದ್ದಾರೆ.
39 ವರ್ಷದ ಯುವಕ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ ಉತ್ತರ ಕನ್ನಡ ಜಿಲ್ಲೆಯ ಓರ್ವ ಧಾರವಾಡ ಜಿಲ್ಲೆಯ ಓರ್ವ, ಉಡುಪಿ ಜಿಲ್ಲೆಯ ಓರ್ವ ಸಾವನ್ನಪ್ಪಿದ್ದಾರೆ.


(ಗಲ್ಫ್ ಕನ್ನಡಿಗ) ಮೃತಪಟ್ಟ 39 ವರ್ಷದ ಯುವಕ ಮಂಗಳೂರಿನ ನಿವಾಸಿಯಾಗಿದ್ದು ಈತ ಜುಲೈ 28ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮೃತಪಟ್ಟಿದ್ದರು. ಇವರು refractory hypoxaemia/ refractory ARDS, secondary bacterial infection, renal failure, cardio respiratory failure ನಿಂದ ಬಳಲುತ್ತಿದ್ದರು. 

(ಗಲ್ಫ್ ಕನ್ನಡಿಗ) ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 62 ವರ್ಷದ ಗಂಡಸು, ಮಂಗಳೂರಿನ 69 ವರ್ಷದ ಹೆಂಗಸು, 73 ವರ್ಷದ ಗಂಡಸು ಉತ್ತರ ಕನ್ನಡ ಜಿಲ್ಲೆಯ ಕಾರವಾರದ 66 ವರ್ಷದ ಗಂಡಸು, ಧಾರವಾಡ ಜಿಲ್ಲೆಯ 66 ವರ್ಷದ ಗಂಡಸು,  ಉಡುಪಿ ಜಿಲ್ಲೆಯ ಪಡುಬಿದ್ರೆಯ 52 ವರ್ಷದ ಗಂಡಸು ಮೃತಪಟ್ಟಿದ್ದಾರೆ.

(ಗಲ್ಫ್ ಕನ್ನಡಿಗ) ಇಂದು ಜಿಲ್ಲೆಯಲ್ಲಿ ‌ 208 ಮಂದಿಗೆ ಕೊರೊನಾ ದೃಢಪಟ್ಟಿದೆ. ಈವರೆಗೆ 5311 ಮಂದಿಗೆ ಕೊರೊನಾ ದೃಢಪಟ್ಟಿದೆ ‌ . ಇಂದು 118  ಮಂದಿ ಗುಣಮುಖರಾಗಿದ್ದು ಒಟ್ಟು 2456  ಮಂದಿ ಗುಣಮುಖರಾಗಿದ್ದಾರೆ. 2715 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.