-->
ಮಗು ತನ್ನದಲ್ಲವೆಂಬ ಅನುಮಾನ: ಪ್ರೇಯಸಿ, ಮಗು ಸೇರಿ ಇಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಕಟುಕ Murder

ಮಗು ತನ್ನದಲ್ಲವೆಂಬ ಅನುಮಾನ: ಪ್ರೇಯಸಿ, ಮಗು ಸೇರಿ ಇಬ್ಬರ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಕಟುಕ Murder



ಕಟುಕನೊಬ್ಬ ತನ್ನ ಪ್ರೇಯಸಿ ಹಾಗೂ ಆರು ತಿಂಗಳ ಮಗುವಿನ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಮಜ್ನುಕಾ ತಿಲ್ಲಾ ಪ್ರದೇಶದಲ್ಲಿ ನಡೆದಿದೆ. ಉತ್ತರಾಖಂಡ ಮೂಲದ ನಿಖಿಲ್ ಎಂಬ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳವಾರ ನಿಖಿಲ್ ಸೋನಾಲ್ ಹಾಗೂ ಆಕೆಯ 6 ತಿಂಗಳ ಮಗುವನ್ನು ಹತ್ಯೆ ಮಾಡಿದ್ದ.

ಸರ್ಜಿಕಲ್ ಬ್ಲೇಡ್​​ನಿಂದ ಕೊಲೆಗೈದ ಬಳಿಕ ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದ. ಆತ್ಮಹತ್ಯೆಗೂ ಯತ್ನಿಸಿದ್ದ ಎಂಬುದು ತಿಳಿದುಬಂದಿದೆ. ಕೊನೆಗೆ ಆತನನ್ನು ಹಲ್ದ್ವಾನಿಯಲ್ಲಿರುವ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ.

ನಿಖಿಲ್ ಮತ್ತು ಸೋನಾಲ್ 2023ರಲ್ಲಿ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೇಟಿ ನೀಡಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಅದೇ ವರ್ಷದ ಕೊನೆಯಲ್ಲಿ ಆಕೆ ಗರ್ಭಿಣಿಯೂ‌ ಆಗಿದ್ದಳು. ಪೊಲೀಸರ ಪ್ರಕಾರ ಆಗ ಅವಿವಾಹಿತರಾಗಿದ್ದರು. ಈ ವೇಳೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಇಬ್ಬರಿಗೂ ಮಗುವನ್ನು ಸಾಕಲು ಇಷ್ಟವಿರಲಿಲ್ಲ. ಆರಂಭದಲ್ಲಿ ಗರ್ಭಪಾತ ಮಾಡಲು ಯತ್ನಿಸಿದ್ದರು. ಅದು ಸಾಧ್ಯವಾಗಲಿಲ್ಲ, 2024ರಲ್ಲಿ ಮಗು ಜನಿಸಿತ್ತು.

ಬಳಿಕ ದಂಪತಿ ಮಗುವನ್ನು ಅಲ್ಮೋರಾದಲ್ಲಿರುವ ಅಪರಿಚಿತ ವ್ಯಕ್ತಿಗೆ 2ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಹಣದಿಂದ ಅವರು ದೆಹಲಿಗೆ ಸ್ಥಳಾಂತರಗೊಂಡಿದ್ದರು. ಆರಂಭದಲ್ಲಿ ವಜೀರಾಬಾದ್​​ನಲ್ಲಿ ವಾಸಿಸುತ್ತಿದ್ದರು. ಬಳಿಕ ಮಜ್ನುಕಾ ತಿಲ್ಲಾಗೆ ತೆರಳಿದ್ದರು. ದೆಹಲಿಯಲ್ಲಿರುವಾಗ ಪ್ರೇಯಸಿ ಸೋನಲ್‌ಗೆ ರಶ್ಮಿ ಎಂಬಾಕೆಯ ಪರಿಚಯವಾಗಿದೆ. ಆಗಾಗ ಅವರ ಮನೆಗೆ ಸೋನಲ್ ಹೋಗಿಬರುತ್ತಿದ್ದಳು. ನಿಖಿಲ್‌ನೊಂದಿಗೆ ಜಗಳಾವಾದಾಗಲೆಲ್ಲಾ ಆಕೆ ಅವರ ಮನೆಗೆ ಹೋಗುತ್ತಿದ್ದಳು.

ಇದರಿಂದ ರಶ್ಮಿಯ ಪತಿ ದುರ್ಗೇಶ್‌‌ನೊಂದಿಗೆ ಸೋನಲ್‌ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ನಿಖಿಲ್​ಗೆ ಬಂದಿದೆ. ಆಕೆ ಮತ್ತೆ ಗರ್ಭಿಣಿಯಾಗಿದ್ದಾಳೆ. ಈ ಬಾರಿ, ನಿಖಿಲ್ ಮಗುವನ್ನು ಉಳಿಸಿಕೊಳ್ಳಲು ಸೋನಲ್ ಬಯಸಿದ್ದಳು. ಹಾಗೆಯೇ ಮಗುವನ್ನು ತನ್ನ ಜತೆಯೇ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಳು. ಕೊಲೆಗೂ ಮುನ್ನ ಸೋನಾಲ್ ನಿಖಿಲ್‌ನೊಂದಿಗೆ ಮುಗಿಸಿಕೊಂಡು ರಶ್ಮಿ ಮನೆಯಲ್ಲಿ 20-25 ದಿನಗಳ ಕಾಲ ಇದ್ದಳು. ಈ ವೇಳೆ ನಿಖಿಲ್ ಆಕೆಯನ್ನು ಹಿಂದಿರುಗುವಂತೆ ಮನವೊಲಿಸಲು ಪ್ರಯತ್ನಿಸಿದ್ದ. ಆದರೆ ಆಕೆ ಬರಲು ಒಪ್ಪಿರಲಿಲ್ಲ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ರಶ್ಮಿ ಹಾಗೂ ದುರ್ಗೇಶ್ ತಮ್ಮ ಪುತ್ರಿಯನ್ನು ಕರೆದುಕೊಂಡು ಬರಲು ಶಾಲೆಗೆ ಹೋಗಿದ್ದರು. ಆಗ ಸೋನಲ್ ಆರು ತಿಂಗಳ ಮಗುವಿನೊಂದಿಗೆ ಮನೆಯಲ್ಲಿದ್ದರು. ಆಗ ನಿಖಿಲ್ ಅವರ ಮನೆಗೆ ಹೋಗಿ ಮೊದಲು ಸೋನಾಲ್​​ರನ್ನು ಕೊಲೆ ಮಾಡಿದ್ದ. ಬಳಿಕ ಮಗುವಿನ ಬಾಯಿಗೆ ಟೇಪ್ ಅಂಟಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತನ್ನನ್ನು ಯಾರೂ ಪತ್ತೆ ಹಚ್ಚಬಾರದೆಂದು ಫೋನ್ ಅಲ್ಲಿಯೇ ಬಿಟ್ಟು ಹೋಗಿದ್ದಾನೆ.

ರಶ್ಮಿ ಮತ್ತು ದುರ್ಗೇಶ್ ತಮ್ಮ ಹಿರಿಯ ಮಗಳೊಂದಿಗೆ ಶಾಲೆಯಿಂದ ಹಿಂತಿರುಗಿದಾಗ, ರಕ್ತದ ಮಡುವಿನಲ್ಲಿ ಸೋನಾಲ್ ಮತ್ತು ಮಗುವಿನ ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಿಖಿಲ್ ಮೊದಲು ತನ್ನ ಮನೆಗೆ ಹೋಗಿ, ಆತ್ಮಹತ್ಯೆಗೆ ಯತ್ನಿಸಿದ್ದ. ಅದು ವಿಫಲವಾದಾಗ, ದೆಹಲಿ ರೈಲು ನಿಲ್ದಾಣಕ್ಕೆ ಹೋಗಿ, ಹಲ್ದ್ವಾನಿ ಹೋಗುವ ಮೊದಲು ಬರೇಲಿಗೆ ಹೋಗಿದ್ದ. ಹಲ್ದ್ವಾನಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಾನೇ ಕೊಲೆ ಮಾಡಿರುವುದಾಗಿ ನಿಖಿಲ್ ಒಪ್ಪಿಕೊಂಡಿದ್ದಾನೆ.

Ads on article

Advertise in articles 1

advertising articles 2

Advertise under the article