-->
ರಕ್ಷಿಸಿದ ನಾಯಿಂದಲೇ ಪ್ರಾಣಬಿಟ್ಟ ರಾಜ್ಯ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ

ರಕ್ಷಿಸಿದ ನಾಯಿಂದಲೇ ಪ್ರಾಣಬಿಟ್ಟ ರಾಜ್ಯ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ


ಬುಲಂದ್​ಶಹರ್: ತಾನು ರಕ್ಷಿಸಿದ ಸ್ವಾನದಿಂದಲೇ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದಿದೆ.

ನಾಯಿ ಕಡಿತಕ್ಕೊಳಗಾದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ. ಬ್ರಿಜೇಶ್ ಬೀದಿ ನಾಯಿಯೊಂದನ್ನು ರಕ್ಷಿಸಿದ್ದರು. ಆ ನಾಯಿ ಅವರಿಗೆ ಕಚ್ಚಿತ್ತು. ಆದರೆ ಸಣ್ಣ ಗಾಯವೆಂದು ಅಷ್ಟಾಗಿ ತಲೆ ಕೆಡಿಸದೆ ನಿರ್ಲಕ್ಷ್ಯ ಮಾಡಿದ್ದರು. ಆದರೆ ರೇಬಿಸ್ ರೋಗಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದಾರೆ.

ಅವರ ಕೊನೆಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೇಬಿಸ್​ ರೋಗಕ್ಕೆ ತುತ್ತಾಗಿ ಹಾಸಿಗೆಯ ಮೇಲೆ ಮಲಗಿ ನೋವಿನಿಂದ ಒದ್ದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಾರ್ಚ್​​ನಲ್ಲಿ ಬೀದಿ ನಾಯಿಯೊಂದು ಚರಂಡಿಗೆ ಬಿದ್ದಿತ್ತು. ರಕ್ಷಿಸುವ ಸಮಯದಲ್ಲಿ ಆ ನಾಯಿ  ಬ್ರಿಜೇಶ್ ಸೋಲಂಕಿ ಬಲಗೈಗೆ ಕಚ್ಚಿತ್ತು. ಅದನ್ನು ಸಣ್ಣ ಗಾಯವೆಂದು ಭಾವಿಸಿ, ನಿರ್ಲಕ್ಷಿಸಿದ್ದರು. ರೇಬಿಸ್ ಲಸಿಕೆಯನ್ನೂ ಪಡೆದಿರಲಿಲ್ಲ. ಕೊನೆಗೆ ಅದೀಗ ಅವರ ಪ್ರಾಣಕ್ಕೆ ಮುಳುವಾಗಿದೆ.

Ads on article

Advertise in articles 1

advertising articles 2

Advertise under the article