-->
6ವರ್ಷದ ಬಾಲಕಿಯನ್ನು ಮುದುವೆಯಾಗಲು ಮುಂದಾದ 45ರ ವ್ಯಕ್ತಿ: 9ವರ್ಷವಾಗಲಿ ಸ್ವಲ್ಪ ತಡೆಯಿರಿ ಎಂದ ತಾಲಿಬಾನ್ ಸರಕಾರ

6ವರ್ಷದ ಬಾಲಕಿಯನ್ನು ಮುದುವೆಯಾಗಲು ಮುಂದಾದ 45ರ ವ್ಯಕ್ತಿ: 9ವರ್ಷವಾಗಲಿ ಸ್ವಲ್ಪ ತಡೆಯಿರಿ ಎಂದ ತಾಲಿಬಾನ್ ಸರಕಾರ


6ವರ್ಷದ ಬಾಲಕಿಯನ್ನು 45 ವರ್ಷದ ವ್ಯಕ್ತಿಯೋರ್ವನು ಮದುವೆಯಾಗಲು ಹೊರಟ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. ಆದರೆ ತಾಲಿಬಾನ್ ಪಡೆ ಈ ಮದುವೆಯನ್ನು ತಡೆದಿದೆ. ಅಲ್ಲದೆ ಬಾಲಕಿಗೆ 9 ವರ್ಷ ತುಂಬುವವರೆಗೂ ಕಾಯುವಂತೆ ಸೂಚಿಸಿದೆ. ಬಡತನದಿಂದಾಗಿ ಕುಟುಂಬವು ಬಾಲಕಿಯನ್ನು ಮಾರಾಟ ಮಾಡಿದ್ದು, ಮದುವೆಯಾಗಲು ಮುಂದಾದ ವ್ಯಕ್ತಿಗೆ ಈಗಾಗಲೇ ಇಬ್ಬರು ಪತ್ನಿಯರಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮಹಿಳಾ ಶೋಷಣೆ ತಡೆಗಟ್ಟುವ ಹಿನ್ನೆಲೆಯಲ್ಲಿ ಬಾಲ್ಯವಿವಾಹ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿ ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹ ಪದ್ಧತಿಯನ್ನು ಅನುಸರಿತ್ತಾ 6 ವರ್ಷದ ಎಳೆಯ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದನ್ನು ಸ್ವತಃ ತಾಲಿಬಾನ್ ಸರ್ಕಾರ ತಡೆದಿದ್ದು, ಬಾಲಕಿಗೆ 9 ವರ್ಷವಾಗುವವರೆಗೆ ಮದುವೆ ಮಾಡಿಕೊಳ್ಳುವುದನ್ನು ಮುಂದೂಡುವಂತೆ ಸೂಚನೆ ನೀಡಿದೆ.

ಇನ್ನು ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನ ರಾಷ್ಟ್ರದಲ್ಲಿಯೂ ಬಾಲ್ಯ ವಿವಾಹ ಇಂದಿಗೂ ನಡೆಯುತ್ತಿದೆ. ಈ ಮಧ್ಯೆ, 6 ವರ್ಷದ ಚಿಕ್ಕ ಬಾಲಕಿಯನ್ನು 45 ವರ್ಷದ ವ್ಯಕ್ತಿ ಮದುವೆಯಾಗಲು ಯತ್ನಿಸಿರುವುದನ್ನು ತಾಲಿಬಾನ್ ತಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಹುಡುಗಿಗೆ 9 ವರ್ಷ ತುಂಬುವವರೆಗೂ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ತಾಲಿಬಾನ್ ಸೂಚಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ತೀವ್ರ ಬಡತನದಲ್ಲಿರುವ ಹುಡುಗಿಯ ಕುಟುಂಬವು ಹಣಕ್ಕಾಗಿ ಈ ಚಿಕ್ಕ ಬಾಲಕಿಯನ್ನು ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ 45 ವರ್ಷದ ವ್ಯಕ್ತಿ ತಾನು ಖರೀದಿ ಮಾಡಿದ ಪುಟ್ಟ ಬಾಲಕಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾನೆ.  ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಕಳೆದ ಶುಕ್ರವಾರ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ, ಮಾಹಿತಿ ತಿಳಿದ ತಾಲಿಬಾನ್ ತಂಡವು ವಿವಾಹವನ್ನು ನಡೆಯಲು ಬಿಡಲಿಲ್ಲ. ಹುಡುಗಿಗೆ ಕೇವಲ 6 ವರ್ಷವಾಗಿದ್ದು, ಅವಳಿಗೆ 9 ವರ್ಷ ತುಂಬುವವರೆಗೂ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ತಾಲಿಬಾನ್ ಸೂಚಿಸಿದೆ.

ಹುಡುಗಿ ಮತ್ತು 45 ವರ್ಷದ ವ್ಯಕ್ತಿಯನ್ನು ಬಂಧಿಸಿದ ತಾಲಿಬಾನ್ ತಂಡವು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ಹುಡುಗಿಯನ್ನು ಮನೆಗೆ ಕಳುಹಿಸಿದ ತಾಲಿಬಾನ್ ಪಡೆ, 45 ವರ್ಷದ ವ್ಯಕ್ತಿಗೆ ಹುಡುಗಿಗೆ ಒಂಬತ್ತು ವರ್ಷ ತುಂಬುವವರೆಗೂ ಕಾಯುವಂತೆ ಹೇಳಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷವೂ ಇದೇ ರೀತಿಯ ಪ್ರಕರಣವೊಂದು ಅಫ್ಘಾನಿಸ್ತಾನದಿಂದ ವರದಿಯಾಗಿತ್ತು. 2021 ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ತಾಲಿಬಾನ್ ಹೆಣ್ಣು ಮಕ್ಕಳ ಶಿಕ್ಷಣವನ್ನು ನಿಷೇಧಿಸಿದ ನಂತರ ಅಫ್ಘಾನಿಸ್ತಾನದ ಬಾಲ್ಯ ವಿವಾಹಗಳಲ್ಲಿ ಶೇ.25ರಷ್ಟು ಏರಿಕೆಯಾಗಿದೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಇದೀಗ ಅಪಘಾನಿಸ್ತಾನ ದೇಶದ ಜನನ ಪ್ರಮಾಣದಲ್ಲಿ ಶೇ.45 ರಷ್ಟು ಏರಿಕೆಯಾಗಿದೆ ಎಂಬುದೂ ಆತಂಕಕಾರಿ ವಿಚಾರವಾಗಿದೆ.

Ads on article

Advertise in articles 1

advertising articles 2

Advertise under the article