-->
ದೇವಸ್ಥಾನದ ಅಂಗಣದಲ್ಲಿ ಸಿಕ್ಕಿದ್ದ 2ರೂ.ಗೆ ಬದಲಾಗಿ 55ವರ್ಷಗಳ ಬಳಿಕ 10ಸಾವಿರ ರೂ. ಹುಂಡಿಗೆ ಹಾಕಿದ ಭಕ್ತ

ದೇವಸ್ಥಾನದ ಅಂಗಣದಲ್ಲಿ ಸಿಕ್ಕಿದ್ದ 2ರೂ.ಗೆ ಬದಲಾಗಿ 55ವರ್ಷಗಳ ಬಳಿಕ 10ಸಾವಿರ ರೂ. ಹುಂಡಿಗೆ ಹಾಕಿದ ಭಕ್ತ



ತಮಿಳುನಾಡು: ದೇವಸ್ಥಾನಕ್ಕೆ ಹೋಗಿದ್ದ ಭಕ್ತನೋರ್ವನಿಗೆ ಅಂಗಣದಲ್ಲಿ 2 ರೂ. ಹಣ ಆವರಣದಿಂದ ಸಿಕ್ಕಿತ್ತು. ಈ ವೇಳೆ ದೇವಸ್ಥಾನದಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಆ ಹಣ ಯಾರದ್ದೆಂದು ಕೇಳಲು ಸಾಧ್ಯವಾಗಿಲ್ಲ. ಕಳೆದುಕೊಂಡವರಿಗೆ ನೀಡಲು ಸಾಧ್ಯವಾಗಿಲ್ಲ. ಆದರೆ ಈ ಭಕ್ತ 2 ರೂಪಾಯಿ ಹಣವನ್ನು ದೇವಸ್ಥಾನಕ್ಕೆ ನೀಡದೆ, ತನ್ನ ಬಳಿ ಇಟ್ಟುಕೊಂಡಿದ್ದ. ಈ ಘಟನೆ ನಡೆದಿದ್ದು ಬರೋಬ್ಬರಿ 55 ವರ್ಷಗಳ ಹಿಂದೆ. ಆದರೆ ಕಳೆದ 55 ವರ್ಷದಲ್ಲಿ ತಾನು 2 ರೂ. ಹಣ ಇಟ್ಟುಕೊಂಡಿರುವುದು ಆ ಭಕ್ತನಿಗೆ ತೀವ್ರವಾಗಿ ಕಾಡಿತ್ತು. ಇದೀಗ 55 ವರ್ಷಗಳ ಬಳಿಕ ತಾನು ಇಟ್ಟುಕೊಂಡ 2 ರೂ.ಗೆ ಬದಲಿಗೆ 10,000 ರೂಪಾಯಿ ಹುಂಡಿಗೆ ಹಾಕಿದ ಘಟನೆ ಅಮ್ಮಾಪೆಟಾಯಿ ಬಳಿ ಇರುವ ಚೆಲ್ಲಂದಿ ಅಮ್ಮನ್ ದೇವಸ್ಥಾನದಲ್ಲಿ ನಡೆದಿದೆ.

ಚೆಲ್ಲಂದಿ ಅಮ್ಮನ್ ದೇವಸ್ಥಾನ ತಮಿಳುನಾಡಿನ ಅತ್ಯಂತ ಪ್ರಸಿದ್ಧ ದೇವಸ್ಥಾನ. ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ತಮ್ಮ ಹರಕೆ ತೀರಿಸಿಕೊಳ್ಳುತ್ತಾರೆ. ಈಕೆ ನಂಬಿದ ಭಕ್ತರನ್ನು ಕೈಬಿಡುವುದಿಲ್ಲ ಅನ್ನುವ ನಂಬಿಕೆ ಈಗಲೂ ಎಲ್ಲರಲ್ಲಿ ಇದೆ. 55 ವರ್ಷಗಳ ಹಿಂದೆ ಇದೇ ದೇವಸ್ಥಾನಕ್ಕೆ ಬಂದ ಭಕ್ತನೋರ್ವನಿಗೆ ಇದೇ ಚೆಲ್ಲಂದಿ ಅಮ್ಮನ್ ದೇವಸ್ಥಾನದ ಆವರಣದಲ್ಲಿ 2 ರೂ. ಸಿಕ್ಕಿತ್ತು. 55 ವರ್ಷದ ಹಿಂದೆ ಹೆಚ್ಚಿನ ಭಕ್ತರು ಇರಲಿಲ್ಲ. ಇಷ್ಟೇ ಅಲ್ಲ ಅಂದು 2 ರೂ.ಗೆ ಮೌಲ್ಯವೂ ಹೆಚ್ಚಿತ್ತು.

ದೇವಸ್ಥಾನಕ್ಕೆ ಬಂದ ಯಾರದ್ದೋ ಹಣ ಇದಾಗಿತ್ತು. ಆದರೆ ದೇವಸ್ಥಾನದಲ್ಲಿ ಯಾರು ಇರಲಿಲ್ಲ. ಯಾರದ್ದು ಅನ್ನೋದು ಗೊತ್ತಾಗಲಿಲ್ಲ. 2 ರೂ. ಹೆಕ್ಕಿದ ಭಕ್ತ, ಈ ಹಣವನ್ನು ಹುಂಡಿಗೆ ಅಥವಾ ದೇವಸ್ಥಾನಕ್ಕೆ ನೀಡಲಿಲ್ಲ. ಈ ರೀತಿಯ ಆಲೋಚನೆ ಭಕ್ತನಿಗೆ ಬರಲಿಲ್ಲ. ಹೀಗಾಗಿ 2 ರೂ. ಹಣ ತನ್ನಲ್ಲೇ ಇಟ್ಟುಕೊಂಡ. ಬಳಿಕ ದೇವಸ್ಥಾದಿಂದ ಮರಳಿದ್ದ.

ದೇವಸ್ಥಾನದಿಂದ ಮನೆಗೆ ತೆರಳಿ ತನ್ನ ಕಾರ್ಯಗಳಲ್ಲಿ ತೊಡಗಿದ್ದ. ಈ 2 ರೂಪಾಯಿ ಹಣ ಬಳಿಕ ಖರ್ಚಾಗಿತ್ತು. ಆದರೆ 2 ರೂಪಾಯಿ ಹಣವನ್ನು ಕಳೆದುಕೊಂಡವರಿಗೆ ನೀಡಲು ಸಾಧ್ಯವಾಗಿಲ್ಲ. ಈ ಹಣ ಯಾರದ್ದೊ ಭಕ್ತರು ದೇವಸ್ಥಾನಕ್ಕೆ ತಂದಿರುವ ಹಣವಾಗಿರಬಹುದು. ಇದೇ ವಿಚಾರದಲ್ಲಿ ಪಶ್ಚಾತ್ತಾಪ ಹೊಂದಿದ ಆ ಭಕ್ತ ಅಂದಿನ 2 ರೂ. ಮೌಲ್ಯಕ್ಕೆ ಇದೀಗ 10,000 ರೂ. ಹಣವನ್ನು ಪತ್ರ ಸಮೇತ ಹುಂಡಿಗೆ ಹಾಕಿದ್ದೇನೆ. 
  

Ads on article

Advertise in articles 1

advertising articles 2

Advertise under the article