14ವರ್ಷಗಳ ಪ್ರೀತಿ, ಮದುವೆಯಾಗಿ 35ದಿನಕ್ಕೆ ಮಡದಿ ಮಸಣಕ್ಕೆ
ಅವರದ್ದು ಬರೋಬ್ಬರಿ 14ವರ್ಷಗಳ ಪ್ರೀತಿ, ಆದರೆ ಮದುವೆಯಾಗಿ ಕೇವಲ 35 ದಿನಕ್ಕೆ ಅವರ ವೈವಾಹಿಕ ಜೀವನವು ಅಂತ್ಯವಾಗಿದೆ.
ಪ್ರಶಾಂತ್ ಹಾಗೂ ಹರ್ಷಿತಾ ಎಂಬ ಈ ಜೋಡಿ ಬಹಳ ಆಸೆಪಟ್ಟು ಮದುವೆಯಾದರೂ ಅವರಿಗೆ ಬಾಳಲು ಅದೃಷ್ಟವಿರಲಿಲ್ಲ. ಅಪಘಾತದಿಂದ ಈ ಜೋಡಿ ದೈಹಿಕವಾಗಿ ದೂರವಾಗಿದೆ.
ಅರ್ಧಕ್ಕೆ ಬಿಕಾಂ ನಿಲ್ಲಿಸಿ, ಕ್ಯಾಟರಿಂಗ್ ಬ್ಯುಸಿನೆಸ್ ಆರಂಭಿಸಿದ್ದ ಪ್ರಶಾಂತ್‌ರನ್ನು ಹರ್ಷಿತಾ ಮದುವೆಯಾಗಿದ್ದರು. ಹರ್ಷಿಕಾ ಎಂಕಾಂ ಮಾಡಿ ಪ್ರತಿಷ್ಠಿತ ಕಂಪೆನಿಯಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಹರ್ಷಿತಾ ಹಾಗೂ ಪ್ರಶಾಂತ್ ವಿವಾಹವಾಗಿ ಕೇವಲ 35ನೇ ದಿನಕ್ಕೆ ಅಪಘಾತ ನಡೆದಿದೆ. ಹೋಟೆಲ್, ಆಸ್ಪತ್ರೆ, ದೇವಸ್ಥಾನ ಎಂದು ಈ ಜೋಡಿ ಓಡಾಡಿತ್ತು. ಈ ಬಗ್ಗೆ ಮಾತನಾಡಿದ ಪ್ರಶಾಂತ್, “ಹರ್ಷಿತಾಗೆ ಫ್ರೆಂಡ್ಸ್ ಜೊತೆಗೆ ಗೋವಾ ಹೋಗುವ ಪ್ಲ್ಯಾನ್ ಇತ್ತು. ಆದ್ದರಿಂದ ಬಹಳ ಒತ್ತಾಯ ಮಾಡಿಕೊಂಡಿದ್ದಕ್ಕೆ ಹರ್ಷಿತಾ ಅವರ ಫ್ರೆಂಡ್ಸ್ ಜೊತೆಗೆ ನಾವು ಗೋವಾಕ್ಕೆ ಹೊರಟಿದ್ದೆವು. ಎರಡು ಕಾರ್‌ನಲ್ಲಿ ನಾವು ಗೋವಾಕ್ಕೆ ಹೊರಟಿದ್ದೆವು ಎಂದಿದ್ದಾರೆ.
“ಬೆಳಗ್ಗೆ 4.30ಕ್ಕೆ ನಾವು ಮನೆಯಿಂದ ಹೊರಟಿದ್ದೆವು, 7.30ಕ್ಕೆ ಅಪಘಾತ ನಡೆದಿದೆ. ನಾನು ಬೇರೆ ಕಾರಿನಲ್ಲಿ ಅವಳು ಬೇರೆ ಕಾರ್‌ನಲ್ಲಿ ಗೋವಾಕ್ಕೆ ಹೋಗುತ್ತಿದ್ದೆವು. ಬೇರೆಯವರ ಕಾರ್‌ನಲ್ಲಿ ಅವಳು ಬರುವುದಕ್ಕೆ ತಯಾರಿರಲಿಲ್ಲ. ಆದರೆ ಅವಳ ಫ್ರೆಂಡ್ಸ್ ಇದ್ದರೆಂದು ಆ ಕಾರ್‌ನಲ್ಲಿ ಹೋಗಿದ್ದಳು. ಓವರ್ ಸ್ಪೀಡ್‌ನಿಂದ ಅಪಘಾತ ಆಗಿತ್ತು. ದಾವಣಗೆರೆಯಲ್ಲಿ ಅವಳು ನನ್ನ ಕಾರ್‌ಗೆ ಶಿಫ್ಟ್ ಆಗಬೇಕು ಅಂತ ಪ್ಲ್ಯಾನ್ ಆಗಿತ್ತು. ನಾವು ದಾವಣೆಗೆರೆ ರೀಚ್ ಆದೆವು, ಹರ್ಷಿತಾ ರೀಚ್ ಆಗಲಿಲ್ಲ” ಎಂದಿದ್ದಾರೆ.
ಬೆಳಗ್ಗೆ ಮನೆಯಿಂದ ಹೊರಡುವಾಗ “ನೀವು ಗೋವಾದಲ್ಲಿ ಬೈಯ್ಯೋ ಹಾಗಿಲ್ಲ” ಎಂದು ಹರ್ಷಿತಾ ಹೇಳಿದ್ದಳು. ಫಾರ್ಚೂನರ್ ಕಾರ್ ಅಂದು ಅಪಘಾತ ಆಗಿತ್ತು. ಅಪಘಾತದಲ್ಲಿ ಜಾಗದಲ್ಲೇ ನನ್ನ ಪತ್ನಿ ಸೇರಿ ಮೂವರು ತೀರಿಕೊಂಡಿದ್ದರು, ಆಸ್ಪತ್ರೆಗೆ ಸೇರಿಸಿದ್ಮೇಲೆ ಇನ್ನೊಬ್ಬರು ತೀರಿಕೊಂಡರು.
ಪ್ರತಿದಿನ ಹರ್ಷಿತಾ ತಂದೆ ನನಗೆ ಫೋನ್ ಮಾಡಿ ಮಾತನಾಡುತ್ತಾರೆ, ಹರ್ಷಿತಾ ಇಲ್ಲ ಅಂತ ಮಾವನ ಮನೆಯವರ ಜೊತೆ ಕಾಂಟ್ಯಾಕ್ಟ್ ಬಿಟ್ಟಿಲ್ಲ. ಹದಿನಾಲ್ಕು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿ 35 ದಿನಕ್ಕೆ ಹರ್ಷಿತಾ-ಪ್ರಶಾಂತ್ ಬೇರೆ ಬೇರೆ ಆಗಿದ್ದಾರೆ.