ಮಾಡಿರುವ ಎರಡೂ ಸಿನಿಮಾಗಳು ಫ್ಲಾಪ್: ಆದ್ರೆ ಬಿಸಿನೆಸ್ ಕೈಹಿಡಿಯಿತು ಈಗ ಈ ಫ್ಲಾಪ್ ಹೀರೋ 2ಸಾವಿರ ಕೋಟಿ ಒಡೆಯ
Sunday, June 29, 2025
ಸಿನಿಮಾ ಇಂಡಸ್ಟ್ರೀಗೆ ಬರುವರೆಲ್ಲಾ ಸ್ಟಾರ್ ಅಗುವುದಿಲ್ಲ. ಕೆಲವರು ಒಂದೆರಡು ಸಿನಿಮಾ ಮಾಡಿ ಹೆಸರು ಮಾಡಿ ದೊಡ್ಡ ಸ್ಟಾರ್ ಆಗುತ್ತಾರೆ. ಇನ್ನು ಕೆಲವರು ಎರಡು ಮೂರು ಸಿನಿಮಾ ಮಾಡಿದರೂ ಕಲೆ ಕೈಹಿಡಿಯದೆ ಇಂಡಸ್ಟ್ರೀ ಬಿಟ್ಟು ಹೋಗ್ತಾರೆ. ಸ್ವಲ್ಪ ಬ್ಯಾಕ್ ಗ್ರೌಂಡ್ ಇದ್ರೆ ಏನಾದ್ರೂ ಬಿಸಿನೆಸ್ ಮಾಡ್ಕೊಂಡು ಬದುಕ್ತಾರೆ. ಕೋಟಿ ಆಸ್ತಿ ಇದ್ದಲ್ಲಿ ಪ್ಲಾಪ್ ಸಿನಿಮಾ ಯಾಕೆ ಮಾಡಬೇಕು ಹೇಳಿ. ಅಂಥ ಒಬ್ಬ ಯಂಗ್ ಹೀರೋ ಬಗ್ಗೆ ನೋಡೋಣ.
ಈಗ ನಾವು ಹೇಳುತ್ತಿರುವ ಹೀರೋ ಕೂಡ ಅದೇ ರೀತಿಯವರು. ಆ ಹೀರೋ ಹೆಸರು ಗಿರೀಶ್ ಕುಮಾರ್. ಎರಡು ಸಿನಿಮಾದಲ್ಲಿ ಹೀರೋ ಆಗಿ ಟ್ರೈ ಮಾಡಿದ್ರು. ಆದ್ರೆ ವರ್ಕೌಟ್ ಆಗದ್ದರಿಂದ ಈಗ ಬಿಸಿನೆಸ್‌ನಲ್ಲಿ ಬ್ಯುಸಿ. ಸದ್ಯ ಅವರ ಆಸ್ತಿಯೀಗ 2,146 ಕೋಟಿ ರೂ. ದಾಟಿದೆ.
2013ರಲ್ಲಿ 'ರಾಮಯ್ಯ ವಸ್ತಾವಯ್ಯ' ಸಿನಿಮಾದ ಮೂಲಕ ಗಿರೀಶ್ ಕುಮಾರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಶ್ರುತಿ ಹಾಸನ್‌ರೊಂದಿಗೆ ನಟಿಸಿದ ಈ ಸಿನಿಮಾ ಸುಮಾರು 38 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿತ್ತು. ಸಿನಿಮಾ 38 ಕೋಟಿ ವಸೂಲಿ ಮಾಡಿ, ಹೂಡಿಕೆ ವಾಪಸ್ ಬಂದ್ರೂ ಲಾಭ ಆಗಲಿಲ್ಲ. ಆದರೂ ಗಿರೀಶ್ ತಮ್ಮ ನಟನೆಯಿಂದ ಗಮನ ಸೆಳೆದರು. 'ಬೆಸ್ಟ್ ಡೆಬ್ಯೂ' ಹೀರೋ ಆಗಿ ಫಿಲ್ಮ್ ಫೇರ್‌ಗೆ ನಾಮಿನೇಟ್ ಆದ್ರು.
ಗಿರೀಶ್ ಅವರ ಎರಡನೇ ಸಿನಿಮಾ 2016ರಲ್ಲಿ ರಿಲೀಸ್ ಆದ 'ಲವ್ ಶುದ್ಧ'. ಇದು ಕೂಡ ಫ್ಲಾಪ್ ಸಿನಿಮಾ. ವಿಮರ್ಶಕರು ಮತ್ತು ವ್ಯಾಪಾರ ವಿಶ್ಲೇಷಕರನ್ನು ಸಿನೆಮಾ ಆಕರ್ಷಿಸಲಿಲ್ಲ. ಹಾಗಾಗಿ ಸಿನಿಮಾ ತನಗೆ ಸರಿ ಹೋಗಲ್ಲವೆಂದು ಗಿರೀಶ್ ನಿರ್ಧರಿಸಿದರು. ಅವರ ತಂದೆಗೆ ಈಗಾಗಲೇ ಕೋಟಿ ಕೋಟಿ ಆಸ್ತಿ ಇದ್ದಿದ್ದರಿಂದ, ಸಿನಿಮಾ ಬಿಟ್ಟು ಬ್ಯುಸಿನೆಸ್ ಮಾಡಲು ಶುರು ಮಾಡಿದ್ರು.
ಸಿನಿಮಾದಲ್ಲಿ ಫ್ಲಾಪ್ ಆದ್ರೂ, ಗಿರೀಶ್ ಕುಮಾರ್ ಈಗ ದೊಡ್ಡ ಬ್ಯುಸಿನೆಸ್ ಮಾಡ್ತಾ, ಯಶಸ್ವಿ ಉದ್ಯಮಿಯಾಗಿದ್ದಾರೆ. ಅವರ ಕುಟುಂಬದ ಹಿನ್ನೆಲೆ ದೊಡ್ಡದು. ಅವರ ತಂದೆ ಉದ್ಯಮಿ ಮತ್ತು ನಿರ್ಮಾಪಕ. ಅವರು ಟಿಪ್ಸ್ ಇಂಡಸ್ಟ್ರೀಸ್ ನ ಸ್ಥಾಪಕರು. ಈಗ ಗಿರೀಶ್ ಕುಮಾರ್ ಆ ಕಂಪನಿಯ COO (ಚೀಫ್ ಆಪರೇಟಿಂಗ್ ಆಫೀಸರ್). ಕಂಪನಿಯನ್ನು ಲಾಭದಲ್ಲಿ ನಡೆಸುತ್ತಾ, ಕೋಟಿ ಕೋಟಿ ದುಡ್ಡು ಮಾಡ್ತಾ ಇದ್ದಾರೆ.
ಟಿಪ್ಸ್ ಇಂಡಸ್ಟ್ರೀಸ್ ಭಾರತೀಯ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ. ಮ್ಯೂಸಿಕ್ ವೀಡಿಯೊಗಳೊಂದಿಗೆ ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲೂ ಯಶಸ್ಸು ಗಳಿಸಿದೆ. ಗಿರೀಶ್ ಕುಮಾರ್ ಸಿನಿಮಾದಲ್ಲಿ ಫ್ಲಾಪ್ ಆದ್ರೂ, ಬಿಸಿನೆಸ್‌ನಲ್ಲಿ ಮಾತ್ರ ಸಕ್ಸಸ್. ತಮ್ಮ ಕುಟುಂಬದ ಸಂಪತ್ತನ್ನು ಉಳಿಸಿಕೊಂಡಿದ್ದಾರೆ. ತಂದೆ ಕುಮಾರ್ ಎಸ್. ತೌರಾನಿ ಹೂಡಿಕೆಗಳು, ರಮೇಶ್ ಎಸ್. ತೌರಾನಿ ಅಳಿಯನಾಗಿ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸಿದರು.
ಬಹಳಷ್ಟು ಸಿನಿಮಾ ಹೀರೋಗಳು ಬಿಸಿನೆಸ್ ನಲ್ಲಿ ಯಶಸ್ವಿಯಾಗಿದ್ದಾರೆ. ವ್ಯಾಪಾರ ಜ್ಞಾನ ಇಲ್ಲದೆ ಎಂಟ್ರಿ ಕೊಟ್ರೆ ಮಾತ್ರ ಸೋಲುವುದು ಖಚಿತ. ಗಿರೀಶ್ ಹೀರೋ ಆಗಿ ಸೋತರೂ, ಬಿಸಿನೆಸ್ ನಲ್ಲಿ ಚಾಣಾಕ್ಷತನದಿಂದ ವರ್ತಿಸಿ, ಟಿಪ್ಸ್ ಕಂಪನಿಯಲ್ಲಿ ಪ್ರಮುಖ ವ್ಯಕ್ತಿಯಾಗಿ ಬೆಳೆದಿದ್ದಾರೆ. ಗಿರೀಶ್ ಕುಮಾರ್ ಮತ್ತೆ ಸಿನಿಮಾಗೆ ಬರ್ತಾರಾ? ಇಲ್ಲ ಬಿಸಿನೆಸ್ ಮುಂದುವರಿಸುತ್ತಾರಾ ಅನ್ನೋದನ್ನ ನೋಡಬೇಕು.