-->
ಮುರಿದುಬಿತ್ತು ವಿವಾಹ ಪೂರ್ವ ಸಂಬಂಧದಿಂದ ಬೆಳಕಿಗೆ ಬಂತು 2ನವಜಾತ ಶಿಶುಗಳ ರಹಸ್ಯ ಸಮಾಧಿ

ಮುರಿದುಬಿತ್ತು ವಿವಾಹ ಪೂರ್ವ ಸಂಬಂಧದಿಂದ ಬೆಳಕಿಗೆ ಬಂತು 2ನವಜಾತ ಶಿಶುಗಳ ರಹಸ್ಯ ಸಮಾಧಿ




ಪುದುಕ್ಕಾಡ್‌: ವಿವಾಹಪೂರ್ವ ಸಂಬಂಧಕ್ಕೆ ಹುಟ್ಟಿರುವ ಎರಡು ನವಜಾತ ಶಿಶುಗಳನ್ನು ರಹಸ್ಯವಾಗಿ ಹೂತು ಹಾಕಿರುವುದಕ್ಕೆ ಸಂಬಂಧಿಸಿದಂತೆ ಕೇರಳದ ಪುದುಕ್ಕಾಡ್ ಪೊಲೀಸರು ಜೋಡಿಯೊಂದರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಭವಿನ್ ಹಾಗೂ ಅನಿಷಾ ಎಂಬ ಈ ಜೋಡಿ 2020ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿತ್ತು. 2021ರ ನವೆಂಬರ್ 6ರಂದು ಅನಿಷಾ ತನ್ನ ಮನೆಯ ಸ್ನಾನಗೃಹದಲ್ಲಿ ಮೊದಲ ಶಿಶುವಿಗೆ ಜನ್ಮ ನೀಡಿದ್ದಳು. ಆದರೆ ಸರಿಯಾದ ಪಾಲನೆ ಇಲ್ಲದೆ, ಗಂಡು ಶಿಶುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡಿದ್ದ ಕಾರಣದಿಂದಲೂ ಸಾವನ್ನಪ್ಪಿತ್ತು. ಮಗುವಿನ ಮೃತದೇಹವನ್ನು ತನ್ನ ಮನೆಯ ಆವರಣದಲ್ಲಿ ರಹಸ್ಯವಾಗಿ ಹೂಳಲಾಗಿತ್ತು. 8ತಿಂಗಳ ಬಳಿಕ, ಧಾರ್ಮಿಕ ಆಚರಣೆಗಳನ್ನು ಮಾಡಿ ಸಮುದ್ರದಲ್ಲಿ ಅಸ್ತಿ ಮುಳುಗಿಸುವುದಾಗಿ ಹೇಳಿಕೊಂಡು ಭವಿನ್ ಮಗುವಿನ ಮೂಳೆಗಳನ್ನು ತೆಗೆದುಕೊಂಡು ಹೋಗಿದ್ದ.

2024ರ ಎಪ್ರಿಲ್ 29ರಂದು ಅನಿಷಾ ತನ್ನ ಮನೆಯಲ್ಲಿ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಮಗು ಜನಿಸಿದ ತಕ್ಷಣ ಉಸಿರುಗಟ್ಟಿಸಿ ಕೊಂದಿದ್ದಾಗಿ ಅನಿಷಾ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾಳೆ. ಎರಡನೇ ಮಗುವಿನ ಮೃತದೇಹವನ್ನು ಭವಿನ್ ಸ್ಕೂಟರ್‌ನಲ್ಲಿ ಆತನ ಮನೆಗೆ ಸಾಗಿಸಿ, ಅಲ್ಲಿ ಅದನ್ನು ಹೂಳಲಾಗಿತ್ತು.

ವೃತ್ತಿಯಲ್ಲಿ ಪ್ರಯೋಗಾಲಯ ತಂತ್ರಜ್ಞೆಯಾಗಿರುವ ಅನಿಷಾ ಇತ್ತೀಚಿನ ಕೆಲ ತಿಂಗಳುಗಳಿಂದ ಭವಿನ್‌ನಿಂದ ದೂರವಾಗಿದ್ದಳು. ಆಕೆ ಬೇರೆ ವ್ಯಕ್ತಿಯೊಂದಿಗೆ ಮದುವೆಗೆ ತಯಾರಾಗುತ್ತಿದ್ದಾಳೆ ಎಂದು ಭಾವಿಸಿದ ಭವಿನ್, ಎರಡೂ ಮಕ್ಕಳ ಕಳೇಬರದೊಂದಿಗೆ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾನೆ. ಸದ್ಯ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99