
ಐ ಲವ್ ಯು ಪುಟ್ಟ.....: ಒಂದು ಅಮೂಲ್ಯ ನುಡಿನಮನ
ಐ ಲವ್ ಯು ಪುಟ್ಟ.....: ಒಂದು ಅಮೂಲ್ಯ ನುಡಿನಮನ
ಎಂದಿನಂತೆ ಸೋಮವಾರ ಕ್ಲಾಸ್ ರೂಮಿನೊಳಗೆ ಬಂದ ಶಿಕ್ಷಕಿ ಜ್ಯೋತಿ ಮೇಡಂ ಗುಡ್ ಮಾರ್ನಿoಗ್ ಹೇಳಿದ ಬಳಿಕ ಐ ಲವ್ ಯು ಸ್ಟೂಡೆಂಟ್ಸ್ ಎಂದು ಹೇಳುತ್ತಾರೆ. ಆದರೆ ಮನಸ್ಸಿನ ಒಳಗಿಂದ ಪುಟ್ಟ ಎಂಬ ವಿದ್ಯಾರ್ಥಿಗೆ ಐ ಲವ್ ಯು ಇಲ್ಲ ಎಂದು ನೆನೆಸಿಕೊಳ್ತಾರೆ . ಸರಿಯಾಗಿ ತಲೆ ಬಾಚದ, ನೀಟಾಗಿ ಶುಭ್ರ ಯುನಿಫಾರ್ಮ್ ದರಿಸದ, ಕಲಿಯುವದರಲ್ಲಿ ದಡ್ಡನಾಗಿರುವ, ಹೇಳಿದಂತೆ ಕೇಳದ ಪುಟ್ಟಗೆ ಯಾಕೆ ಐ ಲವ್ ಯು ಹೇಳಬೇಕು ಎಂದಾಗಿತ್ತು ಜ್ಯೋತಿ ಮೇಡಂ ರ ಅಂತರಾಳ.
.....
ಹೀಗಿರುತ್ತಾ ಒಂದು ದಿನ ಶಾಲಾ ಪ್ರಿನ್ಸಿಪಾಲ್ ಜ್ಯೋತಿ ಅವರನ್ನು ತನ್ನ ಕೊಠಡಿಗೆ ಕರೆದು ಪುಟ್ಟನ ಪ್ರೋಗ್ರೆಸ್ ಕಾರ್ಡ್ ತೋರಿಸುತ್ತಾರೆ. ಕಡಿಮೆ ಅಂಕ ತೆಗೆದ ಪುಟ್ಟನ ಬಗ್ಗೆ ವಿಚಾರಿಸುತ್ತಾರೆ . ಅವನು ಕಲಿಯುವುದಿಲ್ಲ, ಶಿಸ್ತು ಇಲ್ಲ, ಹೇಳಿದoತೆ ಕೇಳುವುದಿಲ್ಲ. ಎಂದೆಲ್ಲಾ ಕಂಪ್ಲೇಂಟ್ ಮಾಡ್ತಾರೆ.
ಪ್ರಿನ್ಸಿಪಾಲ್ ಪುಟ್ಟನ ಮೂರನೇ, ನಾಲ್ಕನೇ ತರಗತಿಯ ಪ್ರೋಗ್ರೆಸ್ ಕಾರ್ಡ್ ತೋರಿಸುತ್ತಾರೆ. ಎಲ್ಲದರಲ್ಲೂ A ಪ್ಲಸ್ ಜೊತೆಗೆ ಕ್ಲಾಸ್ ಬೆಸ್ಟ್ ಸ್ಟೂಡೆಂಟ್ ಎಂಬ ಬಿರುದು ಕೂಡ.
ಬಳಿಕ ಪ್ರಿನ್ಸಿಪಾಲ್ ಜ್ಯೋತಿ ಅವರಲ್ಲಿ ಪುಟ್ಟನ ತಾಯಿ ಕ್ಯಾನ್ಸರ್ ನಿಂದ ತೀರಿ ಹೋಗಿದ್ದಾರೆ. ಬಳಿಕ ಆತ ಖಿನ್ನನಾಗಿದ್ದಾನೆ. ತಲೆ ಬಾಚುವವರು ಇಲ್ಲ, ಮನೆಯಲ್ಲಿ ಕಲಿಸುವವರು ಇಲ್ಲ.
ಸ್ವಲ್ಪ ಕೇರ್ ತೆಗೆದುಕೊಳ್ಳಿ. ಇದನ್ನು ಕೇಳಿದ ಜ್ಯೋತಿ ಮೇಡಂ ಕಣ್ಣು ಮಂಜಾಯಿತು.
Ok ಸರ್ ಎಂದು ಹೊರಬಂದರು.
.....
ಎಂದಿನಂತೆ ಕ್ಲಾಸ್ ರೂಮ್ ಬಂದವರೇ ಗುಡ್ ಮಾರ್ನಿಂಗ್ ಹೇಳಿ ಬಳಿಕ ಐ ಲವ್ ಯು ಹೇಳಿದರು. ಮತ್ತೊಮ್ಮೆ ಪುಟ್ಟ ಐ ಲವ್ ಯು ಎಂದು ಹೆಸರು ಹೇಳಿ ತಬ್ಬಿಕೊಂಡರು..
.....
ಜ್ಯೋತಿ ಮೇಡಂ ಪುಟ್ಟನನ್ನು ಮತ್ತಷ್ಟು ಪ್ರೀತಿಸ ತೊಡಗಿದರು . ಪುಟ್ಟನೂ ಜ್ಯೋತಿ ಮೇಡಂ ಅವರನ್ನು ಪ್ರೀತಿಸಿ ಹತ್ತಿರವಾಗತೊಡಗಿದ.
ತಲೆ ಬಾಚದ ಪುಟ್ಟ ಚಂದ ತಲೆ ಬಾಚಿ ಕ್ಲಾಸ್ ಗೆ ಬರಲಾರoಬಿಸಿದ. ಯುನಿಫಾರ್ಮ್ ಕೂಡ ನೀಟ್ ಆಗಿ ಹಾಕತೊಡಗಿದ . ಕ್ಲಾಸಲ್ಲೂ ಏಕಾಗ್ರತೆಯಿಂದ ಕುಳಿತು ಕೊಳ್ಳಲಾರಂಭಿಸಿದ. ಮಾರ್ಕ್ ನಲ್ಲೂ ಏರಿಕೆ ಕಂಡುಕೊಂಡ. ದಿನಗಳು ವರುಷಗಳಾಗಿ ಬದಲಾಯಿತು..
.....
ಅಂದು SSLC ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಇಷ್ಟದ ಶಿಕ್ಷಕರಿಗೆ ಸವಿನೆನಪಿನ ಕಾಣಿಕೆ ಕೊಟ್ಟರು.
ಪುಟ್ಟ ಹರಿದ ಹಳೇ ಪೇಪರ್ ಅಲ್ಲಿ ಸುತ್ತಿದ ಏನನ್ನೋ ಜ್ಯೋತಿ ಮೇಡಂ ಗೆ ಕೊಟ್ಟ. ಜ್ಯೋತಿ ಮೇಡಂ ತೆರೆದು ನೋಡಿದಾಗ ಉಪಯೋಗಿಸಿ ಅರ್ಧ ಇದ್ದ Perfume ಬಾಟಲಿ ಮತ್ತು ಒಂದು ಹಳೇ ಬ್ರೇಸ್ಲೆಟ್ ಇತ್ತು. ಅವರು ಬಾಕಿ ಎಲ್ಲಾ ಕಾಣಿಕೆ ಬದಿಗಿಟ್ಟು ಬ್ರೇಸ್ ಲೆಟ್ ಕೈಗೆ ಹಾಕಿಕೊಂಡು, Perfume ಹಚ್ಚಿಕೊಂಡರು.
ಪುಟ್ಟನ ಅಮ್ಮ ಉಪಯೋಗಿಸುತ್ತಿದ್ದ Perfume ಮತ್ತು ಅಮ್ಮನ ಬ್ರೇಸ್ ಲೆಟ್ ಆಗಿತ್ತು. ಪುಟ್ಟನ ಕಣ್ಣಂಚಿನಲ್ಲಿ ನೀರು ಜಿನುಗಿತು
*ಮೇಡಂ ನೀವು ನನ್ನ ಅಮ್ಮಂನಂತೆ ಪರಿಮಳ ಬರುತ್ತೀರಿ ಎಂದ. ಇದೇ ಪರಿಮಳ ನನ್ನ ಅಮ್ಮನದ್ದು.*"
ಜ್ಯೋತಿ ಮೇಡಂ ಪುಟ್ಟನನ್ನು ತಬ್ಬಿಕೊಂಡು ಹಣೆಗೆ ಮುತ್ತಿಕ್ಕಿ ವಿದಾಯ ಹೇಳಿದರು.
.........
ಪುಟ್ಟ ಮತ್ತು ಜ್ಯೋತಿ ಮೇಡಂ ಗೆಳೆತನ ಹಾಗೆ
ಸಾಗಿತ್ತು.ಪತ್ರ ವ್ಯವಹಾರ ನಡೆಯುತ್ತಿತ್ತು. ಪ್ರತಿ ಪತ್ರದಲ್ಲೂ ಪುಟ್ಟ *ನಾನು ಹಲವಾರು ಟೀಚರ್ ನೋಡಿದ್ದೇನೆ ಆದ್ರೆ ಯು ಆರ್ ದಿ ಬೆಸ್ಟ್ ಟೀಚರ್"* ಎಂದು ಬರೆಯುತ್ತಿದ್ದ. *ನಿಮ್ಮಂತ ಟೀಚರ್ ನನಗೆ ಸಿಗಲೇ ಇಲ್ಲ ಎಂದು ಬರೆಯುತ್ತಿದ್ದ.*
ಹೀಗೆ ದಿನಗಳುರುಳಿತು ,ವರ್ಷಗಳು ಕಳೆಯಿತು. ಒಂದು ದಿನ ಮುಂಜಾನೆ ಮತ್ತೊಂದು ಪತ್ರ ಬಂತು..
ಅದು ಲೆಟರ್ ಪ್ಯಾಡ್ ಅಲ್ಲಿ ಬರೆದಿತ್ತು...
*ಪ್ರೀತಿಯ ಅಮ್ಮ,*
*ನಾನು ಮದುವೆಯಾಗುವವನಿದ್ದೇನೆ. ಇಂತಹ ತಾರೀಕಿಗೆ ನನ್ನ ಮದುವೆ ಇಂತಹ ಸಭಾ ಭವನದಲ್ಲಿ ಜರಗಲಿಕ್ಕಿದೆ. ನೀವು ತಪ್ಪದೆ ಬರಬೇಕು. ಮಿಸ್ ಮಾಡಬಾರದು ಪ್ಲೀಸ್..*
ಇತೀ
*Dr. ಪುಟ್ಟ. MD (Oncology)*
ಪತ್ರ ಜೋಪಾನವಾಗಿಟ್ಟ ಜ್ಯೋತಿ
ತನ್ನ ಡೈರಿಯಲ್ಲಿ ಅದನ್ನು ಗುರುತಿಸಿಕೊಂಡರು.
....
ಅಂದು ಪುಟ್ಟನ ಮದುವೆ ದಿನ.ಜ್ಯೋತಿ ಮೇಡಂ ಬೇಗನೆ ಎದ್ದು ಮದುವೆಗೆ ಹೊರಡಲು ತಯಾರಾದರು.
ಮದುವೆ ಸಭಾಂಗಣಕ್ಕೆ ಬಂದು ಹಿಂದಿನ ಸಾಲಲ್ಲಿ ಕುಳಿತುಕೊಳ್ಳಲು ಸಿದ್ದರಾಗುತ್ತಿದ್ದಂತೆ ಎದುರಿಂದ *"ಅಮ್ಮಾ ಇಲ್ಲಿ ಬನ್ನಿ. ನಿಮಗೆ ಇಲ್ಲಿ ಸೀಟ್ ಇದೆ*" ಎಂಬ ಶಬ್ದ ಕೇಳಿತು.ಜ್ಯೋತಿ ಮುಂದೆ ಹೋದರು. ಅಲ್ಲಿ ಸೀಟ್ ಒಂದು ಖಾಲಿ ಇತ್ತು . ಅದರಲ್ಲಿ *Reserved for Mom* ಎಂದು ಬರೆದಿತ್ತು.
ಪುಟ್ಟ ಅವರನ್ನು ಅಲ್ಲಿ ಕುಳ್ಳಿರಿಸಿ ತನ್ನ ನೂತನ ವದುವಿನೊಂದಿಗೆ ಹೇಳುತ್ತಾನೆ "*ಈ ಅಮ್ಮ ಇರದಿದ್ದರೆ ಇಂದು ಈ ಪುಟ್ಟ ಇರುತ್ತಿರಲಿಲ್ಲ*.
*ಈ ಜ್ಯೋತಿಯ ಬೆಳಕು ನಾನು*"
ಅಮ್ಮ ಅದೇ Perfume ಹಾಕಿ ಬoದಿದ್ರು.
ಹಳತಾದ ಅದೇ ಬ್ರೇಸ್ಲೆಟ್ ಕೂಡ ಧರಿಸಿದ್ದರು...
ಪುಟ್ಟ ಮತ್ತೊಮ್ಮೆ ತನ್ನಮ್ಮನ ಸುಗಂಧದಲ್ಲಿ ತಲ್ಲೀನನಾದ.ಜ್ಯೋತಿಯ ಮುಖದಲ್ಲಿ ತನ್ನ ಅಮ್ಮನ ಬೆಳಕು ಕಂಡ....
......
ಈ ಬರಹ ಓದಿದ ಎಲ್ಲಾ ಟೀಚರ್ ರವರಲ್ಲಿ ಒಂದು ವಿನಮ್ರ ವಿನಂತಿ ಏನೆಂದರೆ ನೀವು ಟೀಚರ್ ಆಗುವ ಮುನ್ನ ವಿದ್ಯಾರ್ಥಿಗಳ ಅಪ್ಪ ಅಮ್ಮ ಆಗಬೇಕು. ಇನ್ನಷ್ಟು ಪುಟ್ಟನನ್ನು ಸೃಷ್ಟಿಸಬೇಕು. ಇಂಜಿನಿಯರ್, ಡಾಕ್ಟರ್ , ಒಳ್ಳೆಯ ಮನುಷ್ಯರನ್ನು ತಯಾರು ಮಾಡಬೇಕು . ನಿಮ್ಮ ಕ್ಲಾಸ್ ರೂಮಲ್ಲಿ ಹಲವಾರು ತಲೆಬಾಚದ ಯುನಿಫಾರ್ಮ್ ನೀಟ್ ಇರದ, ಕಡಿಮೆ ಅಂಕ ಗಳಿಸುವ ಪುಟ್ಟಗಳಿದ್ದಾರೆ. ನೀವು ಜ್ಯೋತಿ ಮೇಡಂ ಆಗಬೇಕು.
ನಾಳೆಯಿಂದ ನೀವು ಒಂದು ತೀರ್ಮಾನ ಮಾಡ ಬೇಕು. ಇಂದಿನಿಂದ ನಾನು ಟೀಚರ್ ಅಲ್ಲ ನಾನು ಕಲಿಸುವ ವಿದ್ಯಾರ್ಥಿಗಳಿಗೆ ಅಮ್ಮನೋ ಅಪ್ಪನೋ ಆಗಿದ್ದೇನೆ. ಐ ಲವ್ ಯು ಹೇಳಬೇಕು. ನೀವು ಹಾಕುವ ಮಾರ್ಕಿನ, ಪ್ರೋಗ್ರೆಸ್ ಕಾರ್ಡಿನ ಹಿಂದೆ ವಿದ್ಯಾರ್ಥಿ ಯ ದೊಡ್ಡ ಜೀವನ ಅಡಗಿದೆ.
ಸರಿಯಾಗಿ ಕಲಿಯದ, ಪ್ರಾಪರ್ ಯುನಿಫಾರ್ಮ್ ಧರಿಸದ, ತಲೆ ಕೂದಲು ಸರಿಯಾಗಿ ಬಾಚದ ಟಿಫನ್ ನಲ್ಲಿ ಚಟ್ನಿ ಗಂಜಿ ಮಾತ್ರ ಇರುವ ಹಲವಾರು ಪುಟ್ಟoದಿರು ನಿಮ್ಮ ಕ್ಲಾಸ್ ರೂಮ್ ಒಳಗೆ ಇದ್ದಾರೆ. *ಅವರಿಗೆ ನೀವು ಜ್ಯೋತಿ ಮೇಡಂ ಆಗಿ ಬೆಳಕು ತೋರಿಸಬೇಕು... 🙏🙏🙏*
ಜಮುಕ್ರಿ, ಮೂಲ ಮಲಯಾಳಂ