ಡಿಸಿಸಿ ಬ್ಯಾಂಕ್ ಅಧ್ಯಕ್ಷರ ತಂಡದ ಜಯ: ಡಾ. ರಾಜೇಂದ್ರ ಕುಮಾರ್‌ಗೆ ಮತ್ತೆ ಒಲಿದ ಬಜಪೆ ವ್ಯ.ಸೇ.ಸ.ಬ್ಯಾಂಕ್
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ತಂಡದ ಜಯ: ಡಾ. ರಾಜೇಂದ್ರ ಕುಮಾರ್‌ಗೆ ಮತ್ತೆ ಒಲಿದ ಬಜಪೆ ವ್ಯ.ಸೇ.ಸ.ಬ್ಯಾಂಕ್
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ರಾಜೇಂದ್ರ ಕುಮಾರ್ ನೇತೃತ್ವದ ತಂಡಕ್ಕೆ ಜಯ ಒಲಿದಿದೆ.
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಸಾರಥ್ಯದ 12 ಮಂದಿ ನಿರ್ದೇಶಕರು ಜಯಗಳಿಸಿದ್ದಾರೆ.
ಸಾಮಾನ್ಯ ಸ್ಥಾನಕ್ಕೆ ಡಾ. ಎಂ ಎನ್ ರಾಜೇಂದ್ರ ಕುಮಾರ್ ಮೋನಪ್ಪ ಶೆಟ್ಟಿ ಎಕ್ಕಾರು ರತ್ನಾಕರ ಶೆಟ್ಟಿ ಎಕ್ಕಾರು ರಿತೇಶ್ ಶೆಟ್ಟಿ ಟೆನ್ನಿಸ್ ಡಿಸೋಜಾ ಪರಿಶಿಷ್ಟ ಜಾತಿ ಕ್ಷೇತ್ರದಿಂದ ವಸಂತ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸವಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರರಲ್ಲದವರ ಕ್ಷೇತ್ರದಿಂದ ಸ್ಟ್ಯಾನ್ಲಿ ಡಿಸೋಜಾ ಪ್ರವರ್ಗ ಬಿ ಕ್ಷೇತ್ರದಿಂದ ಭಾಸ್ಕರ ಮಲ್ಲಿ ಪ್ರವರ್ಗ a ಕ್ಷೇತ್ರದಿಂದ ಮಹಮ್ಮದ್ ಶರೀಫ್ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಗೀತಾ ಅಮೀನ್ ಮೀರಾ ಗೆದ್ದಿದ್ದಾರೆ ಎಂದು ಚುನಾವಣಾ ಅಧಿಕಾರಿ ಎನ್ ಜೆ ಗೋಪಾಲ್ ತಿಳಿಸಿದ್ದಾರೆ.