ದಕ್ಷಿಣ ಕನ್ನಡ: ಸರ್ಕಾರಿ ನೌಕರರ ಸಂಘದ ಚುನಾವಣಾ ವೇಳಾಪಟ್ಟಿ ಪ್ರಕಟ
ದಕ್ಷಿಣ ಕನ್ನಡ: ಸರ್ಕಾರಿ ನೌಕರರ ಸಂಘದ ಚುನಾವಣಾ ವೇಳಾಪಟ್ಟಿ ಪ್ರಕಟ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ 2024-2025 ಅವಧಿಯ ದ.ಕ.ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು ಇದರ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಅವರು ನೇಮಕಗೊಂಡಿದ್ದಾರೆ.
ವೇಳಾಪಟ್ಟಿಯ ವಿವರ ಇಲ್ಲಿದೆ...
ಸದಸ್ಯರು ನಾಮಪತ್ರ ಸಲ್ಲಿಸಲು ಆರಂಭದ ದಿನ 28.10.2024 ರಂದು ಬೆಳಿಗ್ಗೆ 11.00 ರಿಂದ 5.00 ಗಂಟೆ ತನಕ.
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 07.11.2024 ರಂದು 5.00 ವರೆಗೆ.
ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ 08.11.2024ರಂದು 11.00ರಿಂದ.
ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಣೆ 08.11.2024 ರಂದು ನಾಮಪತ್ರ ಪರಿಶೀಲನೆಯ ನಂತರ.
ಉಮೇದುವಾರಿಕೆಯನ್ನು ವಾಪಸ್ಸು ಪಡೆಯಲು ಕೊನೆಯ ದಿನಾಂಕ.11.11.2024. 4.30 ಗಂಟೆ ವರೆಗೆ.
ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಪ್ರಕಟಣೆ ದಿನಾಂಕ 11.11.2024ರ ಸಂಜೆ 5.30 ನಂತರ.
ಚುನಾವಣಾ ದಿನಾಂಕ ಸಮಯ ಮತ್ತು ಸ್ಥಳ: ದಿನಾಂಕ 16.11.2024 ರ ಬೆಳಿಗ್ಗೆ 9.00 ಗಂಟೆಯಿಂದ
ಅಪರಾಹ್ನ 4.00 ಗಂಟೆಯವರೆಗೆ.
ಸ್ಥಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಟ್ಟಡ, ಮಿನಿ ವಿಧಾನಸೌಧದ ಬಳೆ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು.
ಮತಗಳ ಎಣಿಕೆ.ದಿನಾಂಕ 16.11.2024ರ ಮತದಾನ ಮುಕ್ತಾಯವಾದ ನಂತರ ಜಿಲ್ಲಾ ಚುನಾವಣಾಧಿಕಾರಿಯವರಿಂದ ಫಲಿತಾಂಶ ಪ್ರಕಟಣೆ.