ಅಮೇಠಿಯಿಂದ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿ: ಗಾಂಧಿ ಕುಟುಂಬದ ಸದಸ್ಯ ರಾಜಕೀಯ ಕಣಕ್ಕೆ?
ಅಮೇಠಿಯಿಂದ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿ: ಗಾಂಧಿ ಕುಟುಂಬದ ಸದಸ್ಯ ರಾಜಕೀಯ ಕಣಕ್ಕೆ?
ಉತ್ತರ ಪ್ರದೇಶದ ಅಮೇಠಿಯಿಂದ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸೂಚನೆ ನೀಡಿದೆ. ಗಾಂಧಿ ಕುಟುಂಬದ ಸದಸ್ಯ ರಾಜಕೀಯ ಕಣಕ್ಕೆ ಇಳಿಯುವ ಮೂಲಕ ದೇಶದಲ್ಲೇ ಕಾಂಗ್ರೆಸ್ ಸಂಘಟನೆಯಲ್ಲಿ ಹೊಸ ಸಂಚಲನ ಉಂಟು ಮಾಡುವ ಸಾಧ್ಯತೆ ಇದೆ.
ರಾಯ್ ಬರೇಲಿ, ಅಮೇಠಿ ಮತ್ತು ಸುಲ್ತಾನ್‌ಪುರ ಕ್ಷೇತ್ರಗಳ ಅಭಿವೃದ್ಧಿಗೆ ಗಾಂಧಿ ಕುಟುಂಬ ಶ್ರಮಿಸಲಿದೆ. ಹಾಲಿ ಸಂಸದರಿಂದ ಅಮೇಠಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಲಿ ಸಂಸದೆ ಸ್ಮೃತಿ ಇರಾನಿಯನ್ನು ಜನರ ಆಯ್ಕೆ ಮಾಡಿ ತಮ್ಮ ತಪ್ಪಿಗೆ ಪರಿತಪಿಸುತ್ತಿದ್ದಾರೆ ಎಂದು ರಾಬರ್ಟ್ ವಾದ್ರಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ಮೊದಲು ಸಂಸದರಾಗಬೇಕು ಎಂದು ಬಯಸುತ್ತೇನೆ. ಬಳಿಕ, ನಾನೂ ರಾಜಕೀಯಕ್ಕೆ ಬರಲು ಇಚ್ಚಿಸುತ್ತೇನೆ. ಜನರು ಮತ್ತು ವಿವಿಧ ಮ=ಪಕ್ಷಗಳ ಸಂಸದರ ಜೊತೆಗೆ ನಾನು ಮಾತುಕತೆ ನಡೆಸಿರುತ್ತೇನೆ. ಅವರೆಲ್ಲರೂ ಪಕ್ಷವನ್ನು ಪ್ರತಿನಿಧಿಸುವಂತೆ ಒತ್ತಾಯಿಸಿದ್ದಾರೆ ಎಂದು ವಾದ್ರಾ ಹೇಳಿದ್ಧಾರೆ.
ಎಲ್ಲರೂ ನನಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ದೇಶದ ಬೇರೆ ಬೇರೆ ಪಕ್ಷಗಳ ನಾಯಕರು ನನ್ನನ್ನು ಆಹ್ವಾನಿಸಿದ್ಧಾರೆ. ಪಕ್ಷಭೇದ ಇಲ್ಲದೆ ಹಲವು ಪಕ್ಷಗಳಲ್ಲಿ ನನಗೆ ಗೆಳೆಯರಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಮೇಠಿ 2019ಕ್ಕಿಂತಲೂ ಹಿಂದೆ ಕಾಂಗ್ರೆಸ್ ಕೈಯಲ್ಲಿತ್ತು. ಇಲ್ಲಿಂದ ರಾಹುಲ್ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕಳೆದ ಬಾರಿ ರಾಹುಲ್ ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.