ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ತ.ನಾಡಿನಿಂದ ಕೈ ಅಭ್ಯರ್ಥಿ: ಮೋದಿ ವಿರುದ್ಧ ಅಜಯ್ ರೈ, ರಾಯ್‌ಗಢ್‌ನಿಂದ ದಿಗ್ವಿಜಯ್ ಸಿಂಗ್ ಸ್ಪರ್ಧೆ
Sunday, March 24, 2024
ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ತ.ನಾಡಿನಿಂದ ಕೈ ಅಭ್ಯರ್ಥಿ: ಮೋದಿ ವಿರುದ್ಧ ಅಜಯ್ ರೈ, ರಾಯ್‌ಗಢ್‌ನಿಂದ ದಿಗ್ವಿಜಯ್ ಸಿಂಗ್ ಸ್ಪರ್ಧೆ
ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಹಾಗೂ ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥ ಸಸಿಕಾಂತ್ ಸೆಂಥಿಲ್ ಅವರಿಗೆ ಕೈ ಟಿಕೆಟ್ ನೀಡಿದೆ.
ಅವರನ್ನು ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದ್ದು, ಹಾಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿನಿಧಿಸುತ್ತಿದೆ. ಶಿವಗಂಗಾ ಕ್ಷೇತ್ರದಿಂದ ಕಾರ್ತಿ ಚಿದಂಬರಂ ಅವರನ್ನು ಕಣಕ್ಕಿಳಿಸಲಾಗಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ರಾಯ್‌ಗಢದಿಂದ ಹುರಿಯಾಳನ್ನಾಗಿ ಮಾಡಲಾಗಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು ಈ ಬಾರಿಯೂ ಮೋದಿ ವಿರುದ್ದ ತೊಡೆ ತಟ್ಟಲಿದ್ದಾರೆ.