ಮಂಗಳೂರಿನಲ್ಲಿ ಕೊರಗ ಸಮುದಾಯದ ಐದು ಜೋಡಿಗಳ ಸಾಮೂಹಿಕ ವಿವಾಹ ಸಂಭ್ರಮ
Sunday, February 11, 2024
ಮಂಗಳೂರಿನಲ್ಲಿ ಕೊರಗ ಸಮುದಾಯದ ಐದು ಜೋಡಿಗಳ ಸಾಮೂಹಿಕ ವಿವಾಹ ಸಂಭ್ರಮ
ಮಂಗಳೂರಿನ ಕುತ್ತೆತ್ತೂರು ಗ್ರಾಮದಲ್ಲಿ ಕೊರಗ ಸಮುದಾಯದ ಐದು ಜೋಡಿಗಳ ಸಾಮೂಹಿಕ ವಿವಾಹ ಸಂಭ್ರಮದಿಂದ ನಡೆಯಿತು.
ಇಲ್ಲಿನ ಕೊರಗರ ಸಮುದಾಯ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘ (ರಿ) ನೇತೃತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಐದು ಜೋಡಿಗಳಿಗೆ ಸಮುದಾಯದ ಪ್ರಮುಖರು ಶುಭ ಕೋರಿ ನವ ಜೀವನ ನಡೆಸುವಂತೆ ಹಾರೈಸಿದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಕೊರಗ ಸಮುದಾಯದ ಸದಸ್ಯರು, ನವ ಜೋಡಿಗಳ ಸಂಬಂಧಿಕರು, ಬಂಧು-ಮಿತ್ರರು ಶುಭ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.