ಲಂಚ ಸ್ವೀಕಾರ: ಕೃಷಿ ಇಲಾಖೆ ಉಪ ನಿರ್ದೇಶಕಿ ಅರೆಸ್ಟ್!
ಲಂಚ ಸ್ವೀಕಾರ: ಕೃಷಿ ಇಲಾಖೆ ಉಪ ನಿರ್ದೇಶಕಿ ಅರೆಸ್ಟ್!
ಅರ್ಧ ಕೋಟಿ ರೂ. ಬಿಲ್ ಪಾವತಿ ಮಾಡಲು ಲಂಚ ಸ್ವೀಕರಿಸುತ್ತಿದ್ದ ಕೃಷಿ ಇಲಾಖೆ ಉಪ ನಿರ್ದೇಶಕಿಯನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು ಕೃಷಿ ಇಲಾಖೆ ಉಪ ನಿರ್ದೇಶಕಿ ಭಾರತಮ್ಮ ಎಂದು ಗುರುತಿಸಲಾಗಿದೆ.
ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿದ್ದ ಪರಮೇಶ್ ಎಂ.ಪಿ. ಎಂಬವರು ಪ್ರಧಾನ ಮಂತ್ರಿ ಕೃಷಿ ಸಂಚಯಿ ಯೋಜನೆಯಡಿ ರೂ. 50 ಲಕ್ಷ ಮೌಲ್ಯದ ವಿವಿಧ ಜಾತಿಯ ಅರಣ್ಯ, ತೋಟಗಾರಿಕಾ ಸಸಿಗಳನ್ನು ಬಂಟ್ವಾಳ ತಾಲೂಕಿಗೆ ಸರಬರಾಜು ಮಾಡಿದ್ದರು.
ಕಾಮಗಾರಿ ನಡೆಸಿದ ಬಿಲ್ ಪಾಔತಿಸಲು ಅರಣ್ಯ ಗುತ್ತಿಗೆದಾರರು ಪರಮೇಶ್ ಅವರಿಗೆ ಒತ್ತಡ ಹಾಕುತ್ತಿದ್ದರು.
ಬಿಲ್ ಪಾವತಿಸಬೇಕಿದ್ದ ಅಧಿಕಾರಿ ಭಾರತಮ್ಮ ಸದ್ರಿ ಬಿಲ್ ಪಾವತಿಸಲು ರೂ. 1 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎಸ್. ಸೈಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕಲಾವತಿ, ಕೆ. ಚಲುವರಾಜು, ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿ ಆರೋಪಿ ಅಧಿಕಾರಿಯನ್ನು ಬಂಧಿಸಿದ್ದಾರೆ.