-->
UDUPI ; ಪೊಲೀಸರನ್ನೇ ಸುಡಲು ಯತ್ನಿಸಿದ ಮಹಿಳೆ..!!

UDUPI ; ಪೊಲೀಸರನ್ನೇ ಸುಡಲು ಯತ್ನಿಸಿದ ಮಹಿಳೆ..!!

ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಅಂಗಡಿ ಸಾಮಗ್ರಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ಪೊಲೀಸರಿಗೆ ದೂರು ಬಂದಿತ್ತು. ಹಿನ್ನೆಲೆ ವಿಚಾರಿಸಲು ತೆರಳಿದ ಎಸ್‌ಐ ಮೇಲೆ ಮಹಿಳೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಪ್ರಯತ್ನಿಸಿದ ಘಟನೆ ಉಡುಪಿಯ ಕೋಟೇಶ್ವರದಲ್ಲಿ ನಡೆದಿದೆ. 
ಬೀಜಾಡಿ ಗ್ರಾಮದ ಕೋಟೇಶ್ವರ ಎಂಬಲ್ಲಿ ಫ್ಯಾಶನ್‌ ಡಿಸೈನ್ ಟೈಲರ್‌ ಮತ್ತು ಫ್ಯಾನ್ಸಿ ಸ್ಟೋರ್ಸ್‌ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಮಹಿಳೆ ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ದೂರು ಕರೆ ಬಂದಿತ್ತು. 

ಹೀಗಾಗಿ ಪೊಲೀಸರು ಮಹಿಳೆಯನ್ನು ವಿಚಾರಿಸಲು ತೆರಳಿದ ವೇಳೆ  ಮಾಲಕಿ ಸರೋಜ ದಾಸ್‌ (43) ಏಕಾಏಕಿ  ಎಸ್‌ಐ ಮೇಲೆ ಸೀಮೆ ಎಣ್ಣೆಯ ಬಾಟಲಿಯಿಂದ ಸೀಮೆ ಎಣ್ಣೆಯನ್ನು ಸಮವಸ್ತ್ರದಲ್ಲಿದ್ದ ಎಸ್‌ಐ ಮೈಗೆ ಹಾಕಲು ಬಂದರು. ತಪ್ಪಿಸಿಕೊಂಡಾಗ ಸೀಮೆಎಣ್ಣೆಯನ್ನು ಅಲ್ಲಿಯೇ ಕೆಳಗೆ ಹಾಕಿ ಬೆಂಕಿ ಹಾಕಿ, ಪೊಲೀಸರಿಗೆ ಬೆಂಕಿಯಿಂದ ಸುಡಲು ಯತ್ನಿಸಿದ್ದಾರೆ. ಸದ್ಯ ಘಟನೆ ವಿಡಿಯೋ ವೈರಲ್ ಆಗಿದೆ. 
ಮಹಿಳೆ ವಿರುದ್ಧ  ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪ್ರಜರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article