UDUPI ; ಬರಿಗಾಲಿನಲ್ಲಿ ರೈಲು ಹತ್ತಿದ ಸರಳ ಶಾಸಕ
Thursday, June 15, 2023
ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಚುನಾವಣೆಗೂ ಮೊದಲು ಸರಳತೆಗೆ ಹೆಸರಾಗಿದ್ದರು. ಚಪ್ಪಲಿ ಹಾಕದೇ, ಪಂಚೆ ತೊಟ್ಟು ಸಾಮಾನ್ಯರಂತೆ ಬದುಕು ರೀತಿ ಸುದ್ದಿಯಾಗಿತ್ತು.
ಸದ್ಯ ಬ್ಯಾಗ್ ಹಿಡಿದು ಮಳೆಯಲ್ಲಿ ಒದೆಯಾಗುತ್ತಾ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಓಡಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಶಾಸಕರಾಗಿ ಆಯ್ಕೆಯಾದ ಬಳಿಕವೂ ಶಾಸಕ ಗುರುರಾಜ್ ಗಂಟಿಹೊಳೆ, ಬೆಂಗಳೂರಿಗೆ ವಿಮಾನ ಕಾರುಗಳಲ್ಲಿ ತೆರಳದೇ ಈಗಲೂ ರೈಲಿನಲ್ಲಿ ತೆರಳುವ ಶಾಸಕರ ಸರಳತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸರಳತೆಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ