UDUPI : ಆರೋಪಿ ಪಾತಳದಲ್ಲಿ ಅಡಗಿ ಕುಳಿತರೂ ಹುಡುಕುತ್ತೇನೆ ಪಂಜುರ್ಲಿ ಅಭಯ
Friday, March 24, 2023
ಪೆಬ್ರವರಿ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆದ ಶರತ್ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಕೊಲೆಗೆ ಭೂಗತ ಲೋಕದ ಲಿಂಕ್ ಕೂಡ ಪಡೆದುಕೊಂಡಿತ್ತು. ಹೀಗಾಗಿ ಕುಟುಂಬಿಕರು, ಕುಟುಂಬದ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ.
ಕೊಲೆಯಾಗಿ ತಿಂಗಳು ಕಳೆದರೂ ಪ್ರಮುಖ ಆರೋಪಿ ಸೆರೆಯಾಗಿಲ್ಲ ಎಂದು ಕುಟುಂಬಿಕರು ತಮ್ಮ ಅಳಲನ್ನು ಪಂಜುರ್ಲಿ ದೈವದ ಮುಂದೆವತೋಡಿಕೊಂಡಿದ್ದಾರೆ. ಆದಷ್ಟು ಶೀಘ್ರವಾಗಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ. ಧೈರ್ಯ ಗೆಡುವುದು ಬೇಡ, ಆರೋಪಿಗಳು ಪಾತಳದಲ್ಲಿ ಅಡಗಿ ಕುಳಿತರೂ ಆರೋಪಿಗಳನ್ನು ಹುಡುಕುತ್ತೇನೆ ಎಂದು ಪಂಜುರ್ಲಿ ದೈವವು ಅಭಯ ನುಡಿದಿದೆ.
ಪೆಬ್ರವರಿ ತಿಂಗಳಲ್ಲಿ ಉಡುಪಿಯ ಪಾಂಗಾಳದಲ್ಲಿ ಬಬ್ಬು ಸ್ವಾಮಿ ದೈವದ ಕೋಲದ ವೇಳೆ ಶರತ್ ಶೆಟ್ಟಿಯನ್ನು ರಸ್ತೆಗೆ ಕರೆಸಿ ಕೊಲೆ ಮಾಡಲಾಗಿತ್ತು..