ಮೂಡಬಿದಿರೆಯ ಜಿ.ಕೆ. ಇನ್ನಿಲ್ಲ

ಮೂಡುಬಿದಿರೆಯ ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ ಇಂದು ನಿಧನರಾದರು.
ಮೂಡುಬಿದಿರೆಯಲ್ಲಿರುವ ತನ್ನ ಎಂಟರ್ ಪ್ರೈಸಸ್‌ಗೆ ಆಗಮಿಸುತ್ತಿದ್ದಾಗ ಹೃದಯದ ನೋವಿಗೊಳಗಾಗಿ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಕಾರ್ಕಳದ ಗಾಂಧಿ ಮೈದಾನದಲ್ಲಿ ಹಗಲು-ರಾತ್ರಿ ಕ್ರಿಕೆಟ್ ಪಂದ್ಯಾಟಕ್ಕಾಗಿ ಲೈಟಿಂಗ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿ ತನ್ನೆರಡು ಕೈಗಳನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನದೇ ಆದ ಜಿ.ಕೆ. ಎಂಟರ್‌ಪ್ರೈಸಸ್ ಉದ್ಯಮವನ್ನು ಪ್ರಾರಂಭಿಸಿದ್ದರು. ಉದ್ಯಮ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಪ್ರಸಿದ್ಧಿಯನ್ನೂ ಪಡೆದುಕೊಂಡಿತು.

ಮೃತರು ಪತ್ನಿ,   ಪುತ್ರಿ  ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.