ಒಮ್ಮೆ ವಿಚ್ಛೇದನ ಪಡೆದಿರುವ 'ಚಾಕೋಲೇಟ್ ಬಾಯ್' ಸಿದ್ದಾರ್ಥ್, ಅದಿತಿ ಮತ್ತೆ ಪ್ರೀತಿಯಲ್ಲಿ ಬಿದ್ರಾ?
Wednesday, March 1, 2023
ಚಿತ್ರರಂಗದಲ್ಲಿ 'ಚಾಕೋಲೇಟ್ ಬಾಯ್' ಆಗಿ ಗುರುತಿಸಿಕೊಂಡಿರುವ ಸಿದ್ದಾರ್ಥ್ ಅವರು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಜೊತೆ ನಟಿ ಅದಿತಿ ರಾವ್ ಹೈದರಿ ಹೆಸರು ಕೇಳಿ ಬರುತ್ತಿದೆ. 'ಮಹಾ ಸಮುದ್ರಂ' ಸಿನಿಮಾದಲ್ಲಿ ಅದಿತಿ, ಸಿದ್ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಇವರಿಬ್ಬರು ಆತ್ಮೀಯರಾಗಿ ಈಗ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸಿದ್‌ಗೆ ಮದುವೆಯಾಗಿ ವಿಚ್ಛೇದನ ಆಗಿದೆ. ಸಾಕಷ್ಟು ನಟಿಯರ ಜೊತೆ ಸಿದ್ ಹೆಸರು ಥಳುಕು ಹಾಕಿಕೊಂಡಿತ್ತು. ಅದಿತಿ ರಾವ್ ಅವರಿಗೂ ಕೂಡ ಮದುವೆಯಾಗಿ ವಿಚ್ಛೇದನವಾಗಿದೆ. ಈಗ ಈ ಜೋಡಿ ಅಧಿಕೃತವಾಗಿ ಪ್ರೀತಿ ಹೇಳಿಕೊಳ್ಳಲಿದೆಯಾ ಎಂದು ಕಾದು ನೋಡಬೇಕಿದೆ.
ತಮಿಳು, ತೆಲುಗು ಚಿತ್ರರಂಗದ 'ಚಾಕೋಲೇಟ್ ಬಾಯ್' ಸಿದ್ದಾರ್ಥ್ ( Siddharth ) ಸದ್ಯ ನಟಿ ಅದಿತಿ ರಾವ್ ಹೈದರಿ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಯಾವ ಪಾತ್ರಕ್ಕಾದರೂ ಸೈ ಜೀವ ತುಂಬಿ, ಪರಕಾಯ ಪ್ರವೇಶ ಮಾಡುವ ಸಿದ್ದಾರ್ಥ್ ಸಾಕಷ್ಟು ಬಾರಿ ರಿಲೇಶನ್‌ಶಿಪ್ ವಿಚಾರದಲ್ಲಿ ಎಡವಿದರು. ಒಂದು ಮದುವೆಯಾಗಿ ವಿಚ್ಛೇದನ ಪಡೆದಿರುವ ಅವರು ಈಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.
ಮೇಘನಾ ಜೊತೆ ಮದುವೆ
ಅದು 2003. ಸಿದ್ದಾರ್ಥ್ ಅವರು ಬಾಲ್ಯದ ಗೆಳತಿ ಮೇಘನಾ ಜೊತೆ ದೆಹಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿದ್ ಮದುವೆ ಫೋಟೋಗಳು ಅಂತರ್ಜಾಲದಲ್ಲಿ ಅಷ್ಟಾಗಿ ಲಭ್ಯವಿಲ್ಲ. ಸಿದ್ ಕೂಡ ಮೊದಲ ಪತ್ನಿ ಮೇಘನಾ ಬಗ್ಗೆ ಕೂಡ ಅಷ್ಟೊಂದು ಮಾಹಿತಿ ಹಂಚಿಕೊಂಡಿಲ್ಲ. ಈ ಜೋಡಿ 2007ರಲ್ಲಿ ವಿಚ್ಛೇದನ ಪಡೆಯಿತು. ಇವರಿಬ್ಬರು ಬೇರೆ ಬೇರೆ ಆದಮೇಲೆ ಸಿದ್ದಾರ್ಥ್ ಅವರು ಸೋಹಾ ಅಲಿ ಖಾನ್ ಜೊತೆ ಡೇಟ್ ಮಾಡಲು ಆರಂಭಿಸಿದ್ದರು ಎನ್ನಲಾಗಿತ್ತು. ಸೋಹಾರಿಂದ ಸಿದ್-ಮೇಘನಾ ಮದುವೆ ಮುರಿದು ಬಿತ್ತು ಅಂತ ಕೂಡ ಹೇಳಲಾಗುತ್ತದೆ.
ಸೋಹಾ ಅಲಿ ಖಾನ್ ಜೊತೆ ಲವ್
'ರಂಗ್ ದೆ ಬಸಂತಿ' ಸಿನಿಮಾ ನಟಿ ಸೋಹಾ ಜೊತೆ ಸಿದ್ ಆತ್ಮೀಯತೆ ಜಾಸ್ತಿ ಆಗಿತ್ತು. ಆಮೇಲೆ ಸಿದ್ದಾರ್ಥ್ ಅವರು ಮುಂಬೈನ ಸೋಹಾ ಮನೆಗೆ ಶಿಫ್ಟ್ ಆದರಂತೆ. ಮೂಲಗಳು ಹೇಳುವಂತೆ, "ಸೋಹಾಗೆ ಸಿದ್ ಗಮನ, ಸಮಯ ಕೊಟ್ಟಿಲ್ಲ. ಇನ್ನು ಎಲ್ಲರ ಮುಂದೆ ರಿಲೇಶನ್‌ಶಿಪ್ ಬಗ್ಗೆ ಮಾತನಾಡಲು ಕೂಡ ರೆಡಿಯಿಲ್ಲ. ಮುಂಬೈನಲ್ಲಿ ಇರೋದು ಕಷ್ಟವಾಗಿರೋದಿಕ್ಕೆ ಬಾಲಿವುಡ್‌ನಿಂದ ಎಷ್ಟೇ ಆಫರ್ ಬಂದರೂ ಅದನ್ನು ಒಪ್ಪಿಕೊಳ್ತಿಲ್ಲ. ಎಷ್ಟು ಜಗಳ ಆದರೂ ಕೂಡ ಸೋಹಾ ಮಾತ್ರ ಮೊದಲು ಕ್ಷಮೆ ಕೇಳಿಬೇಕಿತ್ತಂತೆ"
ಸೋಹಾ ಹಾಗೂ ಸಿದ್ ಕೊನೆಗೂ ಬ್ರೇಕಪ್ ಮಾಡಿಕೊಂಡರು. ಇದರಿಂದ ಹೊರಬರಲು ಸಿದ್ದಾರ್ಥ್ ಒಂದಷ್ಟು ತಿಂಗಳು ಸಮಯ ತಗೊಂಡರು. ಅದಾದ ನಂತರದಲ್ಲಿ ಶ್ರುತಿ ಹಾಸನ್‌ರತ್ತ ಸಿದ್ ಗಮನ ಹೋಯ್ತು ಎನ್ನಲಾಗಿತ್ತು. ಇವರಿಬ್ಬರು ಒಂದೇ ಮನೆಯಲ್ಲಿ ಉಳಿದುಕೊಳ್ಳಲು ಆರಂಭಿಸಿದ್ದರಂತೆ. ಇವರಿಬ್ಬರನ್ನು ಒಟ್ಟಿಗೆ ನೋಡಿ ಕಮಲ್ ಹಾಸನ್ ಫುಲ್ ಖುಷಿಯಾಗಿದ್ದರಂತೆ.