
UDUPI : ಬ್ಯಾರಿಗೇಟಿಗೆ ಸ್ಕೂಟಿ ಡಿಕ್ಕಿ : ಯುವತಿ ಸಾವು
Tuesday, February 14, 2023
ಬ್ಯಾರಿಗೇಟಿಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟಿಯ ಹಿಂಬದಿಯಲ್ಲಿದ್ದ ಕುಳಿತಿದ್ದ ಯುವತಿ ಸಾವನ್ನಪ್ಪಿ, ಸವಾರ ಗಂಭೀರ ಗಾಯಗೊಂಡ ಘಟನೆ ಉಡುಪಿಯ ಕಾಪು ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಮೂಡಬೆಟ್ಟುವಿನಲ್ಲಿ ನಡೆದಿದೆ. ಮಂಗಳೂರಿನ ರೋಶಿನಿ ಡಿಸೋಜ ಸಾವನ್ಪಿದ ಯುವತಿ.
ರೋಶಿನಿ ತನಗೆ ವಿವಾಹ ನಿಶ್ಚಯವಾಗಿದ್ದ ಯುವಕ ಜೊಯೇಲ್ ಎಂಬವರ ಜೊತೆ ಮಂಗಳೂರಿನಿಂದ ಕಲ್ಮಾಡಿ ಚರ್ಚಿಗೆ ಭೇಟಿ ನೀಡಿ ಮಂಗಳೂರಿಗೆ ವಾಪಾಸಾಗುತ್ತಿದ್ದ ವೇಳೆ ಕಟಪಾಡಿ ಸಮೀಪದ ಮೂಡಬೆಟ್ಟು ಬಳಿ ಹಾಕಲಾಗಿದ್ದ ಬ್ಯಾರಿಕೆಡ್ ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಹಿಂಬದಿಯಲ್ಲಿ ಕುಳಿತಿದ್ದ ರೋಶ್ನಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದು, ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ದಾರಿ ಮಧ್ಯೆ ರೋಶ್ನಿ ಮೃತರಾಗಿದ್ದಾರೆ . ಕಳೆದ ಒಂದು ವಾರದಿಂದ ಕಟಪಾಡಿ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಯು ಅರ್ಧಂಬರ್ಧವಾಗಿದ್ದು ಸರಿಯಾದ ಯಾವುದೇ ನಾಮಫಲಕ ಅಳವಡಿಸಿದ ಪರಿಣಾಮವಾಗಿ ಹೆದ್ದಾರಿಯಲ್ಲಿ ದಿನೇ ದಿನೇ ಅಪಘಾತಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಇನ್ನೂ ಕೂಡ ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಅನಾಹುತಗಳು ಸಂಭವಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.