ರಸ್ತೆಯಲ್ಲೇ ಕಾಲೇಜು ಹುಡುಗಿಗೆ ತಾಳಿ ಕಟ್ಟಿದ ಮಂಡ್ಯದ ಹುಡುಗ!
Wednesday, February 8, 2023
ರಸ್ತೆಯಲ್ಲೇ ಯುವಕನೊಬ್ಬ ಕಾಲೇಜು ಹುಡುಗಿಗೆ ತಾಳಿ ಕಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ ತಿಂಗಳು ಆರಂಭವಾಗುತ್ತಿದ್ದಂತೆ ಪ್ರೇಮಿಗಳಿಗೆ ಸಂಬಂಧಿಸಿದ ಸುದ್ದಿಗಳು ಕೂಡ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕಾಲೇಜು ಹುಡುಗಿಗೆ ಹುಡುಗನೊಬ್ಬ ತಾಳಿಕಟ್ಟಿದ್ದು ಕಂಡುಬಂದಿದೆ. ಯುವಕ ಕಾಲೇಜು ಹುಡುಗಿಗೆ ನಡುರಸ್ತೆಯಲ್ಲಿ ತಾಳಿಕಟ್ಟಿದ್ದಾನೆ. ಸ್ಥಳೀಯರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಮಂಡ್ಯದ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿರುವ ರೋಟರಿ ಕಾಲೇಜು ಮುಂಭಾಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ತಡೆದ ಯುವಕ ಬಲವಂತವಾಗಿ ತಾಳಿ ಕಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ವಿಡಿಯೋ ಎಲ್ಲಡೆ ಹರಿದಾಡುತ್ತಿದ್ದು ಆ ಯುವಕ ಮತ್ತು ಕಾಲೇಜು ವಿದ್ಯಾರ್ಥಿನಿ ಯಾರು ಎಂಬುದು ತಿಳಿದು ಬಂದಿಲ್ಲ. ಆದರೆ ಯುವತಿ ಕಾಲೇಜು ಸಮವಸ್ತ್ರದಲ್ಲಿದ್ದು ಕತ್ತಿಗೆ ಕಾಲೇಜು ಐಡೆಂಟಿ ಕಾರ್ಡ್ ಕೂಡ ಹಾಕಿದ್ದಾಳೆ.
ಹಿಂದೊಮ್ಮೆ ಛತ್ತೀಸ್‌ಗಢದ ದುರ್ಗ್ ಪ್ರದೇಶದಲ್ಲಿ ಪ್ರೇಮಿಗಳು ಬೈಕ್‌ನಲ್ಲಿ ಮೈಮರೆತ ವಿಡಿಯೋವೊಂದು ವೈರಲ್ ಆಗಿತ್ತು. ಅಸಭ್ಯ ವರ್ತನೆ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಪ್ರೇಮಿಗಳ ಬಂಧನದ ಬಳಿಕ ಸವಾರಿ ಮಾಡಿದ ಬೈಕ್ ಕದ್ದಿದ್ದು ಎಂದು ತಿಳಿದುಬಂದಿದೆ. ಛತ್ತೀಸ್‌ಗಢ ಪೊಲೀಸರು ಕ್ರಮ ಕೈಗೊಂಡಿದ್ದು, ಅಂತರ್ಜಾಲದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿ ಬೈಕ್ ಓಡಿಸುವಾಗ ರೊಮ್ಯಾಂಟಿಕ್ ದೃಶ್ಯ ಕಂಡು ಬಂದಿದೆ. ಹುಡುಗ ಬೈಕ್ ಓಡಿಸುತ್ತಿರುವಾಗ ಹುಡುಗಿ ಬೈಕ್‌ನ ಟ್ಯಾಂಕ್ ಮೇಲೆ ಹುಡುಗನ ಎದುರು ಕುಳಿತಿದ್ದಾಳೆ. ಕದ್ದ ಬೈಕ್‌ನಲ್ಲಿ ಈ ಜೋಡಿ ಅಸಭ್ಯವಾಗಿ ವರ್ತಿಸಿದ್ದು ಹಿಂಬದಿ ಸವಾರರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಹುಡುಗಿ ಸವಾರನನ್ನು ತಬ್ಬಿಕೊಳ್ಳುತ್ತಿರುವುದನ್ನು ನೋಡಬಹುದು. ಈ ವೇಳೆ ಸವಾರ ಬೈಕ್ ಓಡಿಸುತ್ತಿದ್ದು ಇಬ್ಬರೂ ಕೂಡ ಹೆಲ್ಮೆಡ್ ಅನ್ನು ಧರಿಸಿಲ್ಲ.