
ಛತ್ತಿಸ್‌ಗಢ: 'ಮದುವೆಗೂ ಮುನ್ನವೇ ಮೈಥುನ' ಭಾರತದಲ್ಲೂ ವಿಚಿತ್ರ ಸಂಪ್ರದಾಯ!
Monday, February 27, 2023
ಛತ್ತಿಸ್‌ಗಢ: ಮದುವೆಗೆ ಮುನ್ನ ದೈಹಿಕವಾಗಿ ಸಂಬಂಧವನ್ನು ಬೆಳಸುವುದನ್ನು ಕೆಲವರು ಬೆಂಬಲಿಸುತ್ತಾರೆ. ಕೆಲವರು ಅದನ್ನು ವಿರೋಧಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮದುವೆಗೆ ಮೊದಲು ದೈಹಿಕ ಸಂಬಂಧಗಳನ್ನು ಹೊಂದುವುದು ಸಾಮಾನ್ಯ ವಿಚಾರ.
ಆದರೆ ನಕ್ಸಲ್ ಪೀಡಿತ ಪ್ರದೇಶವಾದ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ವಾಸಿಸುವ ಗೊಂಡ್ ಮತ್ತು ಮುರಿಯಾ ಆದಿವಾಸಿಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳು ಸ್ವಲ್ಪ ವಿಭಿನ್ನವಾಗಿವೆ. ಭಾರತದ ಇತರ ಭಾಗಗಳ ಜನರಿಗೆ ಇವು ಬಹಳ ಆಶ್ಚರ್ಯವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ದೊಡ್ಡ ತಪ್ಪು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಬುಡಕಟ್ಟು ಸಮೂದಾಯದಲ್ಲಿ ಇದು ಸಾಮಾನ್ಯವಾಗಿದೆ. ಪ್ರೇಮಿಗಳು ಒಟ್ಟಿಗೆ ಸುತ್ತಾಡುವುದು, ವಿವಾಹಕ್ಕೂ ಮೊದಲೇ ದೈಹಿಕವಾಗಿ ಒಂದಾಗುವು ಇಲ್ಲಿ ಎಲ್ಲರಿಗೂ
ಗೊತ್ತಿರುವ ವಿಚಾರ.
ಛತ್ತೀಸ್‌ಗಢದ ಈ ಬುಡಕಟ್ಟು ಜನಾಂಗದವರು ಘೋಟುಲ್ ಎಂಬ ಸಂಪ್ರದಾಯವನ್ನು ಅನುಸರಿಸುತ್ತಾರೆ. ಘೋಟುಲ್ ಎಂದರೆ ದೊಡ್ಡ ಬಿದಿರಿನ ಕಂಬಗಳಿಂದ ಮಾಡಿದ ಕಟ್ಟಡ, ಇವು ನಗರ ಪ್ರದೇಶಗಳಲ್ಲಿ ನೈಟ್ ಕ್ಲಬ್ ಗಳಿದ್ದಂತೆ ಇರುತ್ತವೆ. ಯುವಕ-ಯುವತಿಯರು ಪರಸ್ಪರ ತಿಳಿದುಕೊಳ್ಳಲು ಮತ್ತು ಮೋಜು ಮಾಡಲು ಇಲ್ಲಿಗೆ ಬರುತ್ತಾರೆ. 10 ವರ್ಷ ಮೇಲ್ಪಟ್ಟ ಯಾವುದೇ ಮಗು ಘೋಟುಲ್‌ಗೆ ಹೋಗಬಹುದು. ಅಂದಿನಿಂದ ಪೋಷಕರು ಅವರನ್ನು ಫೋಟುಲ್‌ಗೆ ಕಳುಹಿಸಲು ಪ್ರಾರಂಭಿಸುತ್ತಾರೆ.
ಅವರು ಘೋಟುಲ್‌ಗೆ ಹೋಗಿ ಏನು ಬೇಕಾದರೂ ಮಾಡಲು ಸ್ವತಂತ್ರರು. ಘೋಟೂಲ್ ನಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರ. ಯುವಕ ಯುವತಿಯರು ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದಬಹುದು. ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಇಲ್ಲಿ ಅವರು ಯಾವುದೇ ಸಾಮಾಜಿಕ ಒತ್ತಡವಿಲ್ಲದೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
ಬುಡಕಟ್ಟು ಸಂಪ್ರದಾಯದಿಂದಾಗಿ ಈ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಇಲ್ಲಎಂದು ಸ್ಥಳೀಯರು ಹೇಳುತ್ತಾರೆ. ಇದುವರೆಗೆ ಅಂತಹ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.