ದೇಶದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ
Tuesday, February 7, 2023
ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಸತತ
ಎರಡನೆ ದಿನ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರದಲ್ಲಿ 700 ರೂಪಾಯಿ ಕಡಿಮೆಯಾಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 770 ರೂಪಾಯಿ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 2600 ರೂ. ಇಳಿಕೆಯಾಗಿದೆ.
ದೇಶದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 700 ರೂಪಾಯಿ ಕಡಿಮೆಯಾಗಿರುವ ಕಾರಣ ಇದೀಗ 52,400 ರೂಪಾಯಿಗೆ ಇಳಿದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 770 ರೂ. ಕುಸಿತ ಕಂಡಿದ್ದು, 57,160 ರೂಪಾಯಿ ಆಗಿದೆ.
ಒಂದು ಕೆಜಿ ಬೆಳ್ಳಿ ದರದಲ್ಲಿ 2600 ರೂಪಾಯಿ ಇಳಿಕೆಯಾಗಿದೆ. ಕಿಲೋ ಬೆಳ್ಳಿ ದರ 71,200 ರೂಪಾಯಿ ಆಗಿದೆ