ಗೂಡಚಾರಿಕೆ ನಡೆಸುತ್ತಿದ್ದ ಚೀನಾ ಬಲೂನ್ ( Baloon) ಹೊಡೆದುರುಳಿಸಿದ ಅಮೇರಿಕಾ ( Video)
Sunday, February 5, 2023
ವಾಷಿಂಗ್ಟನ್: ಗೂಡಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್ ನ್ನು ಅಟ್ಲಾಂಟಿಕ್ ಮಹಾಸಾಗರದಲ್ಲಿ ಅಮೆರಿಕ ಶನಿವಾರ ಹೊಡೆದು ನೆಲಕ್ಕುರುಳಿಸಿದೆ.
ಮೊಂಟಾನಾದಿಂದ ದಕ್ಷಿಣ ಕೆರೊಲಿನಾದವರೆಗೆ ಅಮೆರಿಕ ಖಂಡವನ್ನು ದಾಟಿ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಚೀನಾದ ಕಣ್ಗಾವಲು ಬಲೂನ್ ಹಾರಾಟ ನಡೆಸುತ್ತಿತ್ತು. ಇದನ್ನು ಕಂಡ ಸೇನೆ, ಅಧ್ಯಕ್ಷ ಜೋ ಬೈಡನ್ ಅವರ ಅನುಮತಿಯನ್ನು ಪಡೆದು ಉಡಾಯಿಸಿದೆ.
ಅಮೆರಿಕ ಖಂಡದ ಆಯಕಟ್ಟಿನ ಸ್ಥಳಗಳಲ್ಲಿ ಬೇಹುಗಾರಿಕೆ ಮಾಡುವ ಸಲುವಾಗಿ ಚೀನಾದ ಬಲೂನ್ ಇಲ್ಲಿ ಹಾರಾಡುತ್ತಿತ್ತು. ಈ ವಿಷಯ ಗಮನಕ್ಕೆ ಬಂದ ಬಳಿಕ ಕ್ಷಿಪ್ರ ನಿರ್ಧಾರ ಕೈಗೊಂಡ ಅಮೇರಿಕ ಸರಕಾರ ಜನರ ಜೀವಹಾನಿಯಾಗದಂತೆ ಬಲೂನ್ ಹೊಡೆದು ಹಾಕಲು ಅನುಮತಿ ನೀಡಿದೆ.
ತಕ್ಷಣವೇ ಕಾರ್ಯಾಚರಣೆಗಿಳಿದ ಉತ್ತರ ಕಮಾಂಡೋ ದಾಳಿ ಮಾಡಿದೆ.ಅಮೆರಿಕ ಖಂಡದಲ್ಲಿ ಕಣ್ಗಾವಲು ನಡೆಸುತ್ತಿದ್ದ ಈ ಬಲೂನ್ ಮೇಲೆ ತೀವ್ರ ನಿಗಾವನ್ನು ವಹಿಸಲಾಗಿತ್ತು. ವಿಶ್ಲೇಷಣೆಯ ಬಳಿಕ ಇದು ಜನರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಅನುಮಾನ ಮೂಡಿದ್ದು, ತಕ್ಷಣ ಸೇನೆಯು ಅಧ್ಯಕ್ಷರಿಗೆ ಮಾಹಿತಿ ರವಾನಿಸಲಾಗಿತ್ತು. ಬಳಿಕ ದೊರೆತ ಆದೇಶದಂತೆ ಎತ್ತರದಲ್ಲಿ ಹಾರುತ್ತಿದ್ದ ಬಲೂನ್ ಅನ್ನು ಉಡಾಯಿಸಲಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಅಮೆರಿಕದ ಗಡಿಗಳಲ್ಲಿ ಸಂಚರಿಸುತ್ತಿದ್ದ ಚೀನಾ ಬಲೂನನ್ನು ವಿಶ್ಲೇಷಿಸಿದ ಬಳಿಕವೇ ಅಮೆರಿಕ ಮಿಲಿಟರಿ ಕಮಾಂಡೋಗಳು ಈ ನಿರ್ಧಾರಕ್ಕೆ ಬಂದಿತ್ತು. ಇದು ಎತ್ತರದಲ್ಲಿ ಹಾರಾಡುತ್ತಾ ಜನರಿಗೆ ಅಪಾಯವನ್ನುಂಟು ಮಾಡುವ ದುರುದ್ದೇಶವನ್ನು ಹೊಂದಿತ್ತು. ರಕ್ಷಣಾ ಇಲಾಖೆ, ಗುಪ್ತಚರ ಸಂಗ್ರಹ ಚಟುವಟಿಕೆಗಳನ್ನು ಬಲೂನ್ ಕಣ್ಗಾವಲಿಟ್ಟಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಟ್ಲಾಂಟಿಕ್ ಸಾಗರದ ಮೇಲೂ ಹಿಡಿತ ಸಾಧಿಸಲು ಹೊರಟಿದ್ದ ಚೀನಾಗೆ ಅಮೆರಿಕ ಪ್ರತಿರೋಧ ಒಡ್ಡುತ್ತಿದ್ದು, ಇದಕ್ಕೆ ಅದರ ನೆರೆರಾಷ್ಟ್ರ ಕೆನಡಾ ಕೂಡ ನೆರವು ನೀಡಿದೆ. ಬಲೂನ್ ಉರುಳಿಸುವಾಗಲೂ ಕೆನಡಾದ ನೆರವು ಪಡೆಯಲಾಗಿದೆ ಎಂದು ಅಮೆರಿಕ ಕಮಾಂಡೋ ಪಡೆ ತಿಳಿಸಿದೆ.
ನೊರಾಡ್ ಮೂಲಕ ಚೀನಾ ಬಲೂನ್ ಉತ್ತರ ಅಮೆರಿಕಕ್ಕೆ ಸಾಗಿದಂತೆ ಅದನ್ನು ಪತ್ತೆ ಹಚ್ಚಲು ಮತ್ತು ವಿಶ್ಲೇಷಿಸಲು ಕೆನಡಾ ಹೆಚ್ಚಿನ ಕೊಡುಗೆ ನೀಡಿದೆ ಎಂದು ಅಮೆರಿಕ ತಿಳಿಸಿದೆ.
ಚೀನಾ ವಿರುದ್ಧದ ಈ ಕ್ರಮವು ನಮ್ಮ ದೇಶದ ಜನರ ಮತ್ತು ಪ್ರದೇಶದ ರಕ್ಷಣೆಗಾಗಿ ನಡೆಸಲಾಗಿದೆ. ದೇಶದ ಸಾರ್ವಭೌಮತ್ವವನ್ನು ಉಲ್ಲಂಘನೆ ಮಾಡಿದಂತಾಗಿದೆ. ಅಮೆರಿಕ ಕಮಾಂಡೋಗಳು ಯಾವಾಗಲೂ ಜನರ ಸುರಕ್ಷತೆ ಮತ್ತು ಭದ್ರತೆಗೆ ಮೊದಲ ಆದ್ಯತೆಯನ್ನು ನೀಡುತ್ತವೆ ಎಂದು ಅಮೇರಿಕಾದ ಅಧಿಕಾರಿಗಳು ತಿಳಿಸಿದರು.
ಚೀನಾ ವಿರುದ್ಧದ ಈ ಕ್ರಮವನ್ನು ಅಮೆರಿಕ ಸಂಸತ್ತು ಶ್ಲಾಘಿಸಿದೆ. ಚೀನಾದ ಈ ಅತಿಕ್ರಮಣ ಮತ್ತೊಂದು ದೇಶದ ಸಾರ್ವಭೌಮತೆಯ ಮೇಲಿನ ದಾಳಿಯಾಗಿದೆ. ಅಮೆರಿಕನ್ನರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಅಧ್ಯಕ್ಷ ಬೈಡನ್ ಅವರ ಈ ನಿರ್ಧಾರ ಸಮಂಜಸವಾಗಿದೆ. ಇದಕ್ಕಾಗಿ ಶ್ಲಾಘಿಸಲಾಗುವುದು. ಉರುಳಿ ಬಿದ್ದ ಬಲೂನ್ ಪರಿಶೀಲಿಸಿ, ಅದರಲ್ಲಿ ಯಾವ ತಂತ್ರಜ್ಞಾನವನ್ನು ಬಳಸುತ್ತಿದ್ದರು ಎಂಬುದನ್ನು ಪತ್ತೆ ಮಾಡಬೇಕು ಎಂದು ಸಲಹೆ ನೀಡಿದೆ.
US shoots down the Chinese surveillance balloon over the Atlantic Ocean and trying to recover parts of surveillance balloon after shooting it down.#ChineseSpyBalloon #chineseballoon #ChineseSpyBallon #Biden pic.twitter.com/vPLUKmXVS5
— Himanshu Purohit (@Himansh256370) February 5, 2023