
UDUPI : ಯುಟ್ಯೂಬ್ ನೋಡಿ ಪ್ರಯೋಗ ಮಾಡಳು ಹೋಗಿ, ಪ್ರಾಣ ಕಳೆದುಕೊಂಡ ಬಾಲಕಿ.!
Tuesday, January 17, 2023
ಯುಟ್ಯೂಬ್ ನೋಡಿ ಬಾಲಕಿಯೊಬ್ಬಳು ಪ್ರಯೋಗ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ಉಡುಪಿಯ ಬ್ರಹ್ಮಗಿರಿಯ ಸಾಯಿರಾಧಾ ಪ್ರೈಡ್ ಅಪಾರ್ಟ್ ಮೆಂಟ್‌ನಲ್ಲಿ ನಡೆದಿದೆ. ಮಂಗಳಾದೇವಿ (11) ಸಾವನ್ಪಿದ ಬಾಲಕಿ.
6ನೇ ತರಗತಿಯ ವಿದ್ಯಾರ್ಥಿನಿ ಮಂಗಳಾದೇವಿ, ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಅದನ್ನು ಪ್ರಯೋಗ ಮಾಡುವ ಅಭ್ಯಾಸ ಮಾಡಿಕೊಂಡಿದ್ದಳು. ಅದರಂತೆ ಮಧ್ಯಾಹ್ನ 3 ರಿಂದ 5 ಗಂಟೆ ನಡುವೆ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಮನೆಯ ಬಾತ್ ರೂಮಿನಲ್ಲಿ ಬಟ್ಟೆ ಇಡುವ ರಾಡ್ ಗೆ ಚೂಡಿದಾರ ಶಾಲು ಕಟ್ಟಿ ಯಾವುದೋ ಪ್ರಯೋಗ ಮಾಡಲು ಹೋಗಿದ್ದು ಈ ವೇಳೆ ಕುತ್ತಿಗೆಗೆ ಬಿಗಿದು ಮೃತಪಟ್ಟಿದ್ದಾಳೆ. ಎಂದು ಅಂತ ತಂದೆ ಪ್ರವೀಣ್ ಶೆಟ್ಟಿ ದೂರು ನೀಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.