-->

UDUPI : ಕಾರ್ಕಳದ ಗಾಂಧಿ ಮೈದಾನದಲ್ಲಿ ಸುಳಿಗಾಳಿ ಹೇಗಿತ್ತು ನೋಡಿ..!!!

UDUPI : ಕಾರ್ಕಳದ ಗಾಂಧಿ ಮೈದಾನದಲ್ಲಿ ಸುಳಿಗಾಳಿ ಹೇಗಿತ್ತು ನೋಡಿ..!!!

ಸುಳಿಗಾಳಿ ಉಡುಪಿಯ ಕಾರ್ಕಳ ಗಾಂಧಿ ಮೈದಾನದಲ್ಲಿ 
ಕಾಣಿಸಿಕೊಂಡು ಕೆಲ ಹೊತ್ತು ನೋಡುಗರ ಕುತೂಹಲಕ್ಕೆ ಕಾರಣವಾಯ್ತು. ಈ ಪ್ರಾಕೃತಿಕ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. 
ಇಲ್ಲಿನ ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಗಾಳಿಯು ಕಾಣಿಸಿಕೊಂಡಿದ್ದು, ಸುರಳಿ ಆಕಾರದಲ್ಲಿ ಧೂಳು, ಮುಗಿಲೆತ್ತರಕ್ಕೆ ಚಿಮ್ಮಲು ಪ್ರಾರಂಭಿಸಿತು. ಈ ವೇಳೆ ದೂಳಿನ ಜೊತೆಗೆ ಮೈದಾನದಲ್ಲಿದ್ದ ಕಸ ಗಿಡಗಂಟಿಗಳನೆಲ್ಲ ಹೊತ್ತು ಮೇಲಿರಿತು. ಕೆಲ ನಿಮಿಷಗಳ ಕಾಲ ಅತ್ಯಂತ ಕುತೂಹಲದಿಂದ ಜನರು ಈ ವಿದ್ಯಮಾನವನ್ನು ವೀಕ್ಷಿಸಿದರು. ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿದ್ದು ಈ ಭಾಗದಲ್ಲಿ ಈ ಹಿಂದೆಯೂ ಇದೇ ರೀತಿಯ ಸುಳಿಗಾಳಿ ಕಂಡುಬಂದಿತ್ತು. ಕಾರ್ಕಳ ಮೂಡುಬಿದರೆ ಅಜೇಕಾರು ಬೆಳಪು ಪರಿಸರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸುಳಿಗಾಳಿ ಕಾಣಿಸಿಕೊಂಡಿತ್ತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99