UDUPI ; ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ, ಪೊಲೀಸರು, ಅಗ್ನಿಶಾಮಕ ದಳವರು
Friday, January 20, 2023
ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಬಾವಿಗಿಳಿದು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಕೆದಿಂಜೆ ಕುಂಟಲ ಗುಂಡಿ ಎಂಬಲ್ಲಿ ನಡೆದಿದೆ. ಹರಿಣಾಕ್ಷಿ (31) ಬಾವಿಗೆ ಬಿದ್ದು ರಕ್ಷಿಸಲ್ಪಟ್ಟ ಮಹಿಳೆ.
ಸುಮಾರು 35 ಅಡಿ ಆಳದ ಬಾವಿಗೆ ಹರಿಣಾಕ್ಷಿ ಕಾಲುಜಾರಿ ಆಕಸ್ಮಿಕವಾಗಿ ಬಿದ್ದಿದ್ದರು. ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರ್ಕಳ ಅಗ್ನಿಶಾಮಕ ದಳದವರು ಹಾಗೂ ಕಾರ್ಕಳ ಆರಕ್ಷಕ ಠಾಣೆಯವರು ಸ್ಥಳಕ್ಕೆ ಆಗಮಿಸಿ, ಬಾವಿಗಿಳಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಹಗ್ಗದ ಸಹಾಯದಿಂದ ಮೇಲಕ್ಕೆ ಎತ್ತಲಾಗಿದ್ದು, ಮಹಿಳೆ ಸಣ್ಣ ಪುಟ್ಟ ಗಾಯಗಳೊಂದಿದೆ ಬದುಕುಳಿದಿದ್ದಾರೆ..