UDUPI : ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಪ್ರಾರ್ಥಿಸಿದ ನಟಿ ಪ್ರೇಮಾ
Thursday, January 19, 2023
ಖಾಸಗಿ ಕಾರ್ಯಕ್ರಮ ನಿಮಿತ್ತ ಉಡುಪಿಗೆ ಆಗಮಿಸಿದ ನಟಿ ಪ್ರೇಮಾ ಕಾಪುವಿನಲ್ಲಿ ಇರುವ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ, ಕಂಕಣ ಭಾಗ್ಯ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈಗಾಗಲೇ ವರ ನೋಡಿದ್ದೇನೆ, ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ನಟಿ ಪ್ರೇಮಾ. ಅಲ್ಲದೇ ಮದುವೆ ವಿಚಾರವಾಗಿಯೇ, ಕೊರಗಜ್ಜನಿಗೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ಪ್ರೇಮಾ ಅವರಿಗೆ ತಮ್ಮ ಅಯ್ಯಪ್ಪ ಪತ್ನಿ, ಅನು ಅಯ್ಯಪ್ಪ ಸಾಥ್ ನೀಡಿದರು.