-->
ರಾಹುಲ್ ಗಾಂಧಿ PA ಹೆಸರಿನಲ್ಲಿ ಯು ಟಿ ಖಾದರ್ ಗೆ ನಕಲಿ ಕರೆ

ರಾಹುಲ್ ಗಾಂಧಿ PA ಹೆಸರಿನಲ್ಲಿ ಯು ಟಿ ಖಾದರ್ ಗೆ ನಕಲಿ ಕರೆ

ಮಂಗಳೂರು: ರಾಹುಲ್ ಗಾಂಧಿ ಪಿ ಎ ಹೆಸರಿನಲ್ಲಿ ವಿಪಕ್ಷ ಉಪನಾಯಕ ಯು ಟಿ ಖಾದರ್ ಗೆ ನಕಲಿ ಕರೆ ಬಂದಿದೆ. ಈ ಬಗ್ಗೆ ಯು ಟಿ ಖಾದರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ಇವರಿಗೆ.

 ಪೊಲೀಸ್‌ ಆಯುಕ್ತರು ಮಂಗಳೂರು ನಗರ ಮಂಗಳೂರು.

 ಮಾನ್ಯರೇ,

 ವಿಷಯ: ನಕಲಿ ಮೊಬೈಲ್ ಕರೆ ಮತ್ತು ಸಂದೇಶ ಕಳುಹಿಸಿರುವುದನ್ನು ತನಿಖೆ ನಡೆಸುವ ಕುರಿತು.

 ಈ ದಿನ ನನ್ನ ಮೊಬೈಲ್ ಸಂಖ್ಯೆ +91 79966 64000 ಕ್ಕೆ ಮಧ್ಯಾಹ್ನ 1.33 ರ ಸಮಯದಲ್ಲಿ +91 81460 06626 ಮೊಬೈಲ್ ಸಂಖ್ಯೆಯಿಂದ ಎರಡು ಸಲ ಕಾಲ್ ಬಂದಿದ್ದು ನಾನು ಸಭೆಯೊಂದರಲ್ಲಿ ಭಾಗವಹಿಸಿದ್ದ ಕಾರಣ ಕಾಲ್ ಸ್ವೀಕರಿಸಿರುವುದಿಲ್ಲ. ಸಭೆ ಮುಗಿಸಿ ಮೊಬೈಲ್‌ ನೋಡುವಾಗ ಸಂದೇಶವೊಂದು ಇದೇ ಸಂಖ್ಯೆಯಿಂದ ಬಂದಿದ್ದು Good afternoon This side kanishka singh pa to sh Rahul Gandhi ji call me ಎಂದು ಬರೆದಿತ್ತು. ಈ ಮೊಬೈಲ್ ಸಂಖ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಲಾಗಿರುವುದು Truecaller ಮೂಲಕ ತಿಳಿಯಿತು. ಬಳಿಕ ಈ ಕುರಿತು ಮಾಹಿತಿ ಕಲೆ ಹಾಕಿದಾಗ ಇದು ನಕಲಿ ಹೆಸರಲ್ಲಿ ಬಂದ ಕಾಲ್ ಎಂದು ನನಗೆ ಮನವರಿಕೆಯಾಗಿದೆ. ಆದುದರಂದ ಈ ಕುರಿತು ತನಿಖೆ ನಡೆಸಿ ಈ ಕಾಲ್ ಮಾಡಿದವರು ಯಾರು ಮತ್ತು ಯಾಕಾಗಿ ಎಂದು ತಿಳಿಯುವುದರ ಜತೆಗೆ ಈ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ. ನನಗೆ ಬಂದಿರುವ ಕಾಲ್ ಮಾಹಿತಿಯ ಮೊಬೈಲ್ Screenshot ನ ಮುದ್ರಿತ ಪ್ರತಿಯನ್ನು ತಮ್ಮ ಮಾಹಿತಿಗಾಗಿ ಜತೆಗಿರಿಸಿದೆ.

 ತಮ್ಮ ನಂಬುಗೆಯ,

 (ಯು.ಟಿ.ಖಾದರ್)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99