-->

   ನಡ್ಯೋಡಿ ದೈವಸ್ಥಾನದಲ್ಲಿ `ಕೃಷಿ-ತುಳುವೆರೆ ಖುಷಿ' ಕಾರ್ಯಕ್ರಮ

ನಡ್ಯೋಡಿ ದೈವಸ್ಥಾನದಲ್ಲಿ `ಕೃಷಿ-ತುಳುವೆರೆ ಖುಷಿ' ಕಾರ್ಯಕ್ರಮ

 ಮೂಡುಬಿದಿರೆ: ತುಳುನಾಡಿನಲ್ಲಿ ಕೃಷಿಯೆ ನಮ್ಮ ಬದುಕಿಗೆ ಮೂಲ ಆಧಾರವಾಗಿತ್ತು. ಅಂದಿನ ದಿನಗಳಲ್ಲಿ ನಮ್ಮ ಪೂರ್ವಜರಿಗೆ ಕೃಷಿ ಹೊರತಾದ ಉದ್ಯೋಗ ಅಥವಾ ಬದುಕು ಇರಲಿಲ್ಲ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
 ರೈತ ಸಂಘ ಮಾರ್ಪಾಡಿ ಘಟಕದ ವತಿಯಿಂದ ನಡ್ಯೋಡಿ ದೈವಸ್ಥಾನದ ಕಲಾಮಂಟಪದಲ್ಲಿ ನಡೆದ `ಕೃಷಿ-ತುಳುವೆರೆ ಖುಷಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಎನ್.ಎಸ್ ವರ್ಮ, ಹಸಿರು ಶಾಲು ರೈತರ ಸ್ವಾಭಿಮಾನದ ಸಂಕೇತ. ಆದರೆ ಹಸಿರು ಶಾಲು ಹೆಸರಿನಲ್ಲಿ ಕೆಲವರು ಅಡ್ಡ ದಾರಿ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು. ಭಾರತಕ್ಕೆ ವಿದೇಶದಿಂದ ಅಡಿಕೆ ಆಮದನ್ನು ನಿಲ್ಲಿಸದಿದ್ದಲ್ಲಿ ಅಡಿಕೆ ಕೃಷಿಕರಿಗೆ ಆಪತ್ತು ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ಸಂಘ ಮಾರ್ಪಾಡಿ ಘಟಕದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. 
ಮಾಜಿ ಸಚಿವ ಅಭಯಚಂದ್ರ ಜೈನ್, ಪುರಸಭೆ ಉಪಾದ್ಯಕ್ಷೆ ಸುಜಾತ ಶಶಿಧರ್, ಪುರಸಭೆ ಸದಸ್ಯೆ ಮಮತ ಆನಂದ್, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ರೈತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಗೋಪಾಲ್ ಕುಲಾಲ್, ನಡ್ಯೋಡಿ ದೈವಸ್ಥಾನದ ಆಡಳಿತ ಮೊಕ್ತೇಸರ ವಸಂತ ಶೆಟ್ಟಿ, ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಎ. ಕೋಟ್ಯಾನ್, ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ರಾಜೇಶ್ ಕೋಟೆಗಾರ್, ನಡ್ಯೋಡಿ ಯುವಕ ಮಂಡಲದ ಅಧ್ಯಕ್ಷ ಸತೀಶ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ, ರೈತ ಸಂಘದ ಗೌರವ ಅಧ್ಯಕ್ಷ ಮಹ್ಮದ್ ಹನೀಫ್ ಉಪಸ್ಥಿತರಿದ್ದರು. 
ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ವಾಸುದೇವ ಆಚಾರ್ಯ ಸ್ವಾಗತಿಸಿದರು. ರಮೇಶ್ ಅಮೀನ್ ವರದಿ ವಾಚಿಸಿದರು. ವಿಶ್ವನಾಥ ಸಾಲ್ಯಾನ್ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99