
ಶ್ರೀಲೀಲಾಗೆ ತೆಲುಗಿನಲ್ಲಿ ಡಿಮ್ಯಾಂಡಪ್ಪೋ..ಡಿಮ್ಯಾಂಡ್
Thursday, January 26, 2023
ಕನ್ನಡದ ನಟಿ ಶ್ರೀಲೀಲಾ ಸದ್ಯ ತೆಲುಗಿನಲ್ಲಿ ಸಾಕಷ್ಟು ಬೇಡಿಕೆಯ ನಟಿಯಾಗಿದ್ದಾರೆ. ಕಿಸ್, ಭರಾಟೆ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ನಟಿ ಶ್ರೀಲೀಲಾ ಈಗ ಕನ್ನಡದ ಜೊತೆ ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳು ನಟಿಗೆ ಅರಸಿ ಬರುತ್ತಿದೆ.
ರಶ್ಮಿಕಾ ಮಂದಣ್ಣ,ಪೂಜಾ ಹೆಗ್ಡೆ ನಂತರ ಕನ್ನಡದ ನಟಿ ಶ್ರೀಲೀಲಾಗೆ ಟಾಲಿವುಡ್ ನಲ್ಲಿ ಭರ್ಜರಿ ಡಿಮ್ಯಾಂಡ್ ಶುರುವಾಗಿದೆ. ಕಿಸ್, ಭರಾಟೆ, ಬೈ ಟು ಲವ್ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದ ಬ್ಯೂಟಿ `ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು.
ಇತ್ತೀಚಿನ `ಧಮಾಕ' ಸಿನಿಮಾ ಮೂಲಕ ರವಿತೇಜಾಗೆ ನಾಯಕಿಯಾಗಿ ನಟಿಸಿ ಶ್ರೀಲೀಲಾ ಸೈ ಎನಿಸಿಕೊಂಡರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ 100 ಕೋಟಿ ರೂ. ಕಲೆಕ್ಷನ್ ಕೂಡ ಮಾಡಿ ಗೆದ್ದಿದೆ. ಮಹೇಶ್ ಬಾಬು ನಟನೆಯ 28ನೇ ಚಿತ್ರ, ಅನಗನಗ ಒಕ ರಾಜು, ಜ್ಯೂನಿಯರ್, ನಿರ್ದೇಶಕ ಬೊಯಾಪತಿ ಶ್ರೀನು ಜೊತೆಗಿನ ಚಿತ್ರಗಳು ನಟಿಯ ಕೈಯಲ್ಲಿದೆ.
ರಶ್ಮಿಕಾ ನಂತರ ಶ್ರೀಲೀಲಾ ಬೇಡಿಕೆ ದೊಡ್ಡ ಮಟ್ಟದಲ್ಲಿದ್ದು, ಮುಂದಿನ ದಿನಗಳಲ್ಲಿ `ಪುಷ್ಪ' ನಟಿಗೆ ಸೆಡ್ಡು ಹೊಡೆದರು ಅಚ್ಚರಿಪಡಬೇಕಿಲ್ಲ ಎನ್ನುವುದು ಸಿನಿಪಂಡಿತರ ಮಾತು.