ಕ್ರಾಂತಿ ಚಿತ್ರ ವಿಮರ್ಶೆ!
Friday, January 27, 2023
ಡಿ ಬಾಸ್ ದರ್ಶನ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಾಂತಿ ನಿನ್ನೆಯಷ್ಟೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಂಗ್ ಮತ್ತು ಟ್ರೈಲರ್ ನಿಂದ ಸಿನಿಮಾ ಕ್ರೇಜ್ ಹೆಚ್ಚಿಸಿದ ಕಾಂತ್ರಿ ಸಿನಿರಸಿಕರ ಮನ ಗೆದ್ದಿದೆ.
ಚಿತ್ರದ ಟೈಟಲ್ ನಲ್ಲಿಯೇ ಕ್ರಾಂತಿ ಇದೆ. ಇದು ಕೇವಲ ಪಿಚ್ಚರಿಗೆ ಸೀಮಿತವಾಗಿಲ್ಲ ಸಿನಿಮಾ ನೋಡಿದ ಪ್ರತಿಯೊಬ್ಬರು ಬದುಕಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಕ್ರಾಂತಿ ಮಾಡಿದಾಗಲೇ ಸಮಾಜದ ಏಳೆ ಸಾಧ್ಯ ಎನ್ನುವ ಕಥಾ ಹಂದಿರ ಅತ್ಯದ್ಭುತವಾಗಿದೆ.
ದರ್ಶನ ಮತ್ತು ಡಿಂಪಲ್ ಕ್ಲೀನ್ ರಚಿತಾ ರಾಮ್ ಮುದ್ದಾದ ಲವ್ ಸ್ಟೋರಿ ಕೆಮೆಸ್ಟ್ರಿ ಸರಿಯಾಗಿಯೇ ವರ್ಕ್ ಆಗಿದೆ.
ಟಿಕೇಟ್ ಪಡೆದು ಸೀಟ್ ಮೇಲೆ ಕುಳಿತ ಪ್ರೇಕ್ಷಕರಿಗೆ ಚಿತ್ರ ಮೋಸ ಮಾಡುವುದಿಲ್ಲ. ಮನರಂಜನೆಯ ಜೊತೆಗೆ ಅನೇಕ ಭಾವನಾತ್ಮಕ ಅಂಶಗಳು
ಚಿತ್ರದಲ್ಲಿದೆ. ಒಬ್ಬ ಸಾಮಾನ್ಯ ಪ್ರೇಕ್ಷಕರು ಭಯಸುವ ಹಾಡು,ಕಾಮಿಡಿ,ಡಾನ್ಸ್, ಸೆಂಟಿಮೆಂಟ್ ಎಲ್ಲಾ ಅಂಶಗಳನ್ನು ಒಳಗೊಂಡ ಅಚ್ಚುಕಟ್ಟಾದ ಚಿತ್ರ ಕ್ರಾಂತಿ,
ಇನ್ನು ವಿ. ಹರಿಕೃಷ್ಣ ನಿರ್ದೇಶನದ ಬಗ್ಗೆ ಮಾತನಾಡುವ ಹಾಗಿಲ್ಲ. ಚಿತ್ರದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಫ್ಯಾನ್ಸ್ ನೆಕ್ಸ್ ಸೀನ್ ನಲ್ಲಿ ಮರೆತು ಬಿಡುತ್ತಾನೆ.
ಚಿತ್ರದ ಮೆಕಿಂಗ್ ಸೂಪರ್ ಆಗಿದೆ. ಇಡೀ ಚಿತ್ರವನ್ನು ಎಲ್ಲಾ ಅಂಶಗಳನ್ನು ತುಂಬಿಸಿ ಪವರ್ ಪ್ಯಾಕಾಗಿ ಕಟ್ಟಿಕೊಟ್ಟಿದ್ದಾರೆ.
ಮತ್ತೊಂದೆಡೆ ಸ್ಟೀನ್ ಪ್ಲೇ ಗಮನ ಸೆಳೆಯುತ್ತದೆ. ಸಿಂಪಲ್ ಕಥೆಯನ್ನು ಹೇಳಿರುವ ವಿ. ಹರಿಕೃಷ್ಣ ನಿರೂಪಣೆ ಶೈಲಿ ಹೊಸದಾಗಿದೆ. ಇನ್ನು ಚಿತ್ರದಲ್ಲಿ ಶಾಲಾ ಮಕ್ಕಳು ಕೆಲವು ಭಾವನಾತ್ಮಕ ದೃಶ್ಯಗಳನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ.
ಬಿಗ್ ಸ್ಟೀನ್ ನಲ್ಲಿ ಪ್ರತಿ ಸೀನ್ ಸೂಪರ್ ಆಗಿ ಮೂಡಿ ಬಂದಿದೆ. ಕ್ಯಾಮರಾ ಶಾಟ್ ಕಣ್ಣುಗಳಿಗೆ ಹಬ್ಬದಂತಿವೆ. ಪಕ್ಕಾ ಫ್ಯಾಮಿಲಿ ಸಿನಿಮಾ, ಡಬಲ್ ಮಿನಿಂಗ್ ಕಿರಿಕಿರಿಯಿಲ್ಲದ ಸಿನಿಮಾ ಕ್ರಾಂತಿ,
ಇನ್ನು ಚಿತ್ರದ ಕೆಲವೊಂದು ಕಡೆ ಓವರ್ ಫೈಟಿಂಗ್ ಆದಂತಿದೆ. ಸಿನಿಮಾ ಕಥೆಯನ್ನು ಸ್ವಲ್ಪ ಎಳೆದಂತ್ತಾಗಿದೆ. ಆದರೆ ಸದ್ಯ ರಾಜಕೀಯ ವಿದ್ಯಮಾನಕ್ಕೆ ಸೂಕ್ತ ಮೆಜೆಸ್ ಮತ್ತು ಐಡಿಯಾ ಕೊಡತ್ತೆ ಕ್ರಾಂತಿ,
ಭವಿಷ್ಯದ ರಾಜಕೀಯ ಹೇಗಿರಬೇಕು ರಾಜಕೀಯದ ಜೊತೆಗಿರುವ, ಪ್ರಜೆಗಳು ಹೇಗಿರಬೇಕು ಎನ್ನುವುದನ್ನು ಹಂತ ಹಂತವಾಗಿ ಹೆಣೆಯಲಾಗಿದೆ. ಇತರೆ ಸಿನಿಮಾಗಳಲ್ಲಿ ರಾಜಕೀಯವನ್ನು ಬೈಯುವುದು ಮಾತ್ರ ಕಂಡಿರುವವರಿಗೆ ಈ ಚಿತ್ರದ ಕೈಮ್ಯಾಕ್ಸ್ ನಲ್ಲಿ ಟ್ವಿಸ್ಟ್ ಇಡಲಾಗಿದೆ.
ಇನ್ನು ಸಮಾಜದ ಬದಲಾವಣೆಗಳಲ್ಲಿ ರಾಜಕೀಯದವರು ಅಷ್ಟೇ ಅಲ್ಲದೆ ಪ್ರಜೆಗಳು ಎಷ್ಟು ಇನ್ವಾಲ್ ಇರುತ್ತಾರೆ ಎನ್ನುವುದನ್ನು ಈ ಸಿನಿಮಾದಲ್ಲಿ ಕಾಣಬಹುದು.
ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ
ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ಸ್ವತಃ ವಿ. ಹರಿಕೃಷ್ಣ ಚಿತ್ರಕ್ಕೆ ಟ್ಯೂನ್ ಹಾಕಿರುವುದು ಸೊಗಸಾಗಿದೆ.
ಇನ್ನು ಸಿನಿಮಾ ಹ್ಯಾಪಿ ಎಂಡಿಂಗಾ ಅಥವಾ ಸ್ಯಾಡ್ ಎಂಡಿಂಗಾ ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿಯಬೇಕು...