
ರಸ್ತೆ ಮೋರಿ ಚರಂಡಿ ಬಗ್ಗೆ ಮಾತಾಡಬೇಡಿ- LOVE JEHAD ನಿಲ್ಲಿಸಲು ಬಿಜೆಪಿ ಬೇಕು : ನಳಿನ್ ಕುಮಾರ್ ಕಟೀಲ್ (video)
Tuesday, January 3, 2023
ಮಂಗಳೂರು: ರಸ್ತೆ, ಮೋರಿ, ಚರಂಡಿ ಎಂಬ ಸಣ್ಣ ವಿಷಯದ ಬಗ್ಗೆ ಮಾತನಾಡಬೇಡಿ, ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಯಾಗಿರುವ ಲವ್ ಜೆಹಾದ್ ತಡೆಯಲು ಬಿಜೆಪಿ ಬೇಕು ... ಹೀಗೆ ಭಾಷಣ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚರ್ಚೆ ಹುಟ್ಟು ಹಾಕಿದ್ದಾರೆ.
ಬಿಜೆಪಿಯ ದ.ಕ ಜಿಲ್ಲೆಯ ಬೂತ್ ವಿಜಯ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ
ತಮ್ಮ ಭಾಷಣದಲ್ಲಿ ಅವರು ರಸ್ತೆ, ಮೋರಿ, ಚರಂಡಿ ಎಂಬ ಸಣ್ಣ ವಿಷಯದ ಬಗ್ಗೆ ಮಾತನಾಡಬೇಡಿ, ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಯಾಗಿರುವ ಲವ್ ಜೆಹಾದ್ ತಡೆಯಲು ಬಿಜೆಪಿ ಬೇಕು ಎಂದು ಹೇಳಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ಧಿ ಕೆಲಸ ದ ಬಗ್ಗೆ ಮಾತಾಡುವುದು ಬೇಡ. ಲವ್ ಜೆಹಾದ್ ಬಗ್ಗೆ ಮಾತಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ