-->

ಮಂಗಳೂರು :ಇನ್ ಜೋನ್ ಸರ್ವಿಸಸ್ ಇಂಡಿಯಾ ಪ್ರೈ ಲಿ ( Inzone  Services India Pvt Ltd) ಸಂಸ್ಥೆಯ ಶುಭಾರಂಭ.

ಮಂಗಳೂರು :ಇನ್ ಜೋನ್ ಸರ್ವಿಸಸ್ ಇಂಡಿಯಾ ಪ್ರೈ ಲಿ ( Inzone Services India Pvt Ltd) ಸಂಸ್ಥೆಯ ಶುಭಾರಂಭ.

 



 ಅಶೋಕ್ ಎಂ ಸಾಲ್ಯಾನ್ ಹಾಗೂ ಬೃಜೇಶ್ ಬೇರಿಂಜ ಇವರುಗಳ ಆಡಳಿತ ನಿರ್ದೇಶನದಲ್ಲಿ Inzone  Services India Pvt Ltd ಎಂಬ ಸಂಸ್ಥೆಯು  ಮಂಗಳೂರಿನ‌ ಓಷಿಯನ್ ಪರ್ಲ್ ನಲ್ಲಿ ಶುಭಾರಂಭಗೊಂಡಿತು.

 ಸಂಸ್ಥೆಯ ಲೋಗೋ ಅನಾವರಣಗೊಳಿಸಿದ credai mangaluru ಇದರ ಅಧ್ಯಕ್ಷರಾದ  ಪುಷ್ಪರಾಜ್ ಜೈನ್ ರವರು ಮಾತನಾಡಿ , ಇನ್ಜೋನ್ ಸರ್ವಿಸ್ ಸಂಸ್ಥೆಯ ಪೂರ್ವ ತಯಾರಿ ನಿಜಕ್ಕೂ ವಿಶೇಷ, ರಾಜ್ಯವಿಡೀ ಸಂಚರಿಸಿ ಎಲ್ಲಾ ಕಂಪನಿಗಳ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಆ ಮೂಲಕ ಸಮಸ್ಯೆಗಳನ್ನು ಪರಿಹರಿಸ ಹೊರಟಿರುವ ಸಂಸ್ಥೆಯು ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ಬೆಳಗಿ ಸಾಮಾನ್ಯ ಜನರಿಂದ ಹಿಡಿದು ಪ್ರತಿಯೊಬ್ಬರಿಗೂ ನಿಮ್ಮ ಸೇವೆ ಲಭಿಸಲಿ ಎಂದು ಹೇಳಿದರು. 



ಮಂಗಳೂರಿನ ಖ್ಯಾತ ವಕೀಲರಾದ  ದಯಾನಂದ ರೈಗಳು ಸಮಾರಂಭಕ್ಕೆ ಶುಭ ಹಾರೈಸಿ, ನೇರದೃಷ್ಟಿಕೋಣದ , ಉತ್ತಮ ಆಡಳಿತ ವ್ಯವಸ್ಥೆ ನಿಮ್ಮದಾಗಲಿ‌ ಎಂದರು. 

ಮತ್ತೋರ್ವ ಮುಖ್ಯ ಅತಿಥಿಗಳು ಮ್ಯಾಕ್ ಗ್ರೂಪ್ ಇದರ ಮೇನೇಜಿಂಗ್ ಡೈರೆಕ್ಟರ್ ಅಬ್ದುಲ್‌ ಮುನೀರ್ ಇವರು ಶುಭ ಹಾರೈಸಿದರು. 

ಗೋಕರ್ಣನಾಥೇಶ್ವರ ಬ್ಯಾಂಕ್ ಅಧ್ಯಕ್ಷರು  ಎಂ ರಾಮಚಂದ್ರ ಮಾತನಾಡಿ, ಇಂದಿನ ದಿನಗಳಲ್ಲಿ ಸರ್ವಿಸ್ ಕೊಡುವ ನಿಟ್ಟಿನಲ್ಲಿ ಕಾರ್ಮಿಕರ ಹಣವನ್ನು ದೋಚಿ, ಅವರುಗಳ ಹಣದಲ್ಲಿ ಆಡವಾಡುತ್ತಿದೆ, ಆದುದರಿಂದ ನಿಮ್ಮಿಂದ ಇಂತಹ ವ್ಯವಸ್ಥೆಗಳಿಗೆ ಕಡಿವಾಣ ಹಾಕಿ ಆ ಮೂಲಕ ನೇರ ಸರ್ವಿಸ್ ನೀಡಬೇಕೆಂದು ಆಶಯಿಸಿ ನಿಮ್ಮೊಂದಿಗೆ ನಮ್ಮ ಸಹಕಾರ ಎಂದಿಗೂ ಇದೆ ಎಂದರು,

 ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ , ಇಂದು ಬಿಡುಗಡೆಗೊಂಡ ಈ ಕಂಪನಿಯ ಇಬ್ಬರು ಡೈರೆಕ್ಟರ್ ಗಳ ಮಹತ್ತರವಾದ ಚಿಂತನೆಗಳು ನಿಮ್ಮ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ , ಕಾರ್ಮಿಕರಿಗೆ ಬೇಕಾದ ಸವಲತ್ತುಗಳನ್ನು ನೀಡುವಲ್ಲಿ ತಮ್ಮ ಸಂಸ್ಥೆ ಸಹಕರಿಸಬೇಕು,ಕಾರ್ಮಿಕರಲ್ಲಿ ಕಳ್ಳತನ ಮಾಡುವಂತಹ ಮನೋಭಾವನೆ ಬದಲಾಗಬೇಕಾದರೆ ಅವರಿಗೆ ನಾವು ಕೊಡುವ ಸವಲತ್ತುಗಳು ಸರಾಗವಾಗಿ ಸಿಗಬೇಕು, ಹಾಗಿದ್ದಾಗ ನಿಮ್ಮ ಸಂಸ್ಥೆಯೂ ಉತ್ತರೋತ್ತರ ಅಭಿವೃದ್ದಿಯಾಗುವುದು,  ನಮ್ಮಿಂದ ಯಾವುದೇ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ ಎಂದರು.

ಸಂಸ್ಥೆಯ. ಅಶೋಕ್ ಎಂ ಸಾಲ್ಯಾನ್ ಅತಿಥಿಗಳನ್ನು ಸ್ವಾಗತಿಸಿ, ಬ್ರಜೇಶ್ ಬೇರಿಂಜ ಪ್ರಾಸ್ತಾವಿಕವಾಗಿ ಮಾತನಾಡಿ , ಕುಮಾರಿ‌ ಮೇಘನಾ ಧನ್ಯವಾದ ಸಮರ್ಪಿಸಿದರು. ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಲ್ಯಾಂಡ್ ಟ್ರೇಡರ್ಸ್ ಕಂಪನಿ ಸಿ.ಇ.ಒ ರಮಿತ್, ಪ್ರಸಾದ್ ಪ್ರಿಂಟರ್ಸ್ ಮಾಲಕರಾದ ಪೆಲಿಸಿಟ ಪತ್ರಾವೊ, ಸೀತಾರಂ ಜಪ್ಪು, ಸುಧಾಕರ ಕರ್ಕೇರ, ಭಾರ ತ್ ಬ್ಯಾಂಕ್ ನಿರ್ದೇಶಕರಾದ ಸೂರ್ಯಕಾಂತ್ ಸುವರ್ಣ, ಉಲ್ಲಾಸ್ ಕುಮಾರ್ ಮೇಲಿನ‌ಮೊಗ್ರು, ಕೆನರಾ ಛೇಂಬರ್ ಆಫ್ ಕಾಮರ್ಸ್ ನ ಮೈತ್ರೇಯ ಮುಂತಾದವರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99