
ಮೂಡುಬಿದಿರೆಯಲ್ಲಿ ಕೋಟ್ಯಾನ್ ಮತ್ತೆ ಕಣದಲ್ಲಿ??
Saturday, January 14, 2023
2023ರಲ್ಲಿ ನಡೆಯಲಿರುವ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಉಮಾನಾಥ ಕೋಟ್ಯಾನ್ ಮತ್ತೆ ಕಣದಲ್ಲಿದ್ದಾರೆ..??
ಈ ಬಗ್ಗೆ ಕೋಟ್ಯಾನ್ ಅವರು ಇತ್ತೀಚೆಗೆ ನಡೆಯುತ್ತಿರುವ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಮಾತನಾಡುವಾಗ ಸ್ವತ: ಅವರೇ ಮುನ್ಸೂಚನೆ ನೀಡುತ್ತಿರುವುದು ಎಲ್ಲರ ಗಮನಕ್ಕೆ ಬರುತ್ತಿದೆ.
ಮೂಡುಬಿದಿರೆಯ ಅಭಿವೃದ್ಧಿ ಕಾರ್ಯಗಳಲ್ಲಿ ಈಗಾಗಲೇ ಎಲ್ಲ ಪಕ್ಷಗಳ ನಾಯಕರಿಂದಲೂ ಸಾರ್ವಜನಿಕವಾಗಿಯೇ ಭೇಷ್ ಏನಿಸಿಕೊಂಡಿರುವುದಲ್ಲದೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದಲೂ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಇದೀಗ ಕೋಟ್ಯಾನ್ ಅಭಿಮಾನಿಗಳು ಅವರ ಮರು ಸ್ಪರ್ಧೆಯನ್ನು ಹೈಕಮಾಂಡ್ ಅಸ್ತು ಎಂದಿರುವುದಾಗಿ ಪ್ರಕಟಿಸಿದ್ದಾರೆ.